ಸಿಎಂ ಬಿಎಸ್ ವೈ ಭೇಟಿಯಾಗಿ ಸಮಾಲೋಚಿಸಿದ ಅನರ್ಹ ಶಾಸಕ ಎಂಟಿಬಿ ನಾಗರಾಜ್….

Promotion

ಬೆಂಗಳೂರು,ಡಿ,14,2019(www.justkannada.in):  ಹೊಸಕೋಟೆ ಬಿಜೆಪಿ ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್ ಇಂದು ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಭೇಟಿಯಾಗಿ ಸಮಾಲೋಚನೆ ನಡೆಸಿದರು.

ನಗರದ ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ಬಿಎಸ್ ಯಡಿಯೂರಪ್ಪ ನಿವಾಸಕ್ಕೆ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಭೇಟಿ ನೀಡಿ ಸಿಎಂ ಬಿಎಸ್ ವೈ ಜತೆ ಚರ್ಚೆ ನಡೆಸಿದರು.  ಸುಮಾರು 45 ನಿಮಿಷಗಳ ಕಾಲ ಬಿಎಸ್ ಯಡಿಯೂರಪ್ಪ ಜತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಹೊಸಕೋಟೆ ವಿಧಾನಭಾ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡರ ವಿರುದ್ದ ಎಂಟಿಬಿ ನಾಗರಾಜ್ ಸೋತಿದ್ದಾರೆ. ಈ ನಡುವೆ ಸೋತಿರುವ ಹೆಚ್.ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಅವರಿಗೂ ಬಿಎಸ್ ವೈ ಸಂಪುಟದಲ್ಲಿ ಸಚಿವ ಸ್ಥಾನ ಸಿಗಲಿದೆಯೇ ಅಥವಾ ಬೇರೆ ಸ್ಥಾನಮಾನ ನೀಡಲಿದ್ದಾರೆಯೇ ಎಂಬುದನ್ನ ಕಾದುನೋಡಬೇಕು.

Key words: disqualified MLA- MTB Nagaraj -met – CM BS yeddyurappa