ಹಂಸಲೇಖ ಅವರ ಹೇಳಿಕೆಗೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥಶ್ರೀ ಅಸಮಾಧಾನ.

Promotion

ಉಡುಪಿ,ನವೆಂಬರ್,15,2021(www.justkannada.in):  ಪೇಜಾವರ ಶ್ರೀಗಳಿಂದ ದಲಿತರ ಮನೆ ವಾಸ್ತವ್ಯದ ಬಗ್ಗೆ ಸಂಗೀತ ನಿರ್ದೇಶಕ ಹಂಸಲೇಖ ನೀಡಿರುವ ಹೇಳಿಕೆ ಬಗ್ಗೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥಶ್ರೀ  ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ವಿಶ್ವಪ್ರಸನ್ನ ತೀರ್ಥಶ್ರೀ, ಇಂತಹ ಮಾತು ಅವರ ಬಾಯಿಂದ ಬರಬಾರದಿತ್ತು.   ಪ್ರಚಾರಕ್ಕಾಗಿ ಸಾಕಷ್ಟು ಜನ ಹೀಗೆ ಮಾಡ್ತಾರೆ  ಹಂಸಲೇಖ ಅವರಿಗೆ ಇದರಿಂದ ಪ್ರಚಾರ ಬೇಕಾಗಿರಲಿಲ್ಲ. ಆ ಕೃಷ್ಣನೇ  ಅದಕ್ಕೆ ಬೇಕಾದ ಪ್ರತಿಕಾರ ಮಾಡುತ್ತಾನೆ.   ನನ್ನ ಗುರುಗಳು ಎಲ್ಲರ ಹೃದಯದಲ್ಲಿ ಕೃಷ್ಣನನ್ನ ಕಂಡವರು ಅದ್ದರಿಂದಲೇ ಅವರು ದಲಿತರ ಕೇರಿಗೆ ಹೋಗುತ್ತಿದ್ದರು  ಯಾರೋ ಏನೋ ಅಂದ ಮಾತ್ರಕ್ಕೆ ನಮ್ಮ ಕೆಲಸ ನಿಲ್ಲಲ್ಲ ಎಂದಿದ್ದಾರೆ.

ಹಂಸಲೇಖ ಅವರ ವಿರುದ್ಧ ಪ್ರತಿಭಟಿಸಲ್ಲ. ಯಾರದರೂ ಪ್ರತಿಭಟಿಸಿದ್ರೆ ಅದು ಅವರ ವೈಯಕ್ತಿಕ. ದಲಿತರ ಜತೆ ನಾವಿದ್ದೇವೆ. ದಲಿತರು ನಮ್ಮಿಂದ ಹೊರತಲ್ಲ ಎಂದು ವಿಶ್ವಪ್ರಸನ್ನ ತೀರ್ಥಶ್ರೀ ತಿಳಿಸಿದ್ದಾರೆ.

Key words: displeasure – pejavar shri-hansalekha-statment