ದಿಶಾ ರವಿ ಬಂಧನ, ಯುವಕರ ನೈತಿಕ ಬಲ ದುರ್ಬಲಗೊಳಿಸುವ ಪ್ರಯತ್ನ : ಡಿ.ಕೆ.ಶಿವಕುಮಾರ್ ಆಕ್ರೋಶ

ಬೆಂಗಳೂರು,ಫೆಬ್ರವರಿ,16,2021(www.justkannada.in) : ಪರಿಸರವಾದಿ ದಿಶಾ ರವಿ ಬಂಧನ ಯುವ ಸಮೂಹದ ನೈತಿಕ ಬಲವನ್ನು ದುರ್ಬಲಗೊಳಿಸುವ ಪ್ರಯತ್ನ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶವ್ಯಕ್ತಪಡಿಸಿದ್ದಾರೆ.jkಈ ಕುರಿತು ಟ್ವೀಟ್ ಅವರು ಟ್ವೀಟ್ ಮಾಡಿದ್ದು, ದಿಶಾರವಿ ಅವರ ಬಂಧನವು ಭಾರತದ ಯುವಕರ ನೈತಿಕ ಬಲವನ್ನು ದುರ್ಬಲಗೊಳಿಸಲು ಮತ್ತು ಭಿನ್ನಾಭಿಪ್ರಾಯವನ್ನು ಕಾನೂನುಬಾಹಿರಗೊಳಿಸುವ ದಾಳಿಯಾಗಿದೆ ಎಂದಿದ್ದಾರೆ.

ಆಕೆಯ ವಿರುದ್ಧ ಪೊಲೀಸರು ಕ್ರಮಕೈಗೊಳ್ಳಲು ಟೂಲ್ ಕಿಟ್ ಪಿತೂರಿಯನ್ನು  ಬಳಸಿರುವುದು ಕಾನೂನು ನಿಯಮಗಳನ್ನು ಉಲ್ಲಂಘಿಸುತ್ತದೆ. ಕಾಂಗ್ರೆಸ್ ಭಾರತಕ್ಕೆ ಸ್ವಾತಂತ್ರ್ಯ ತಂದಿತು. ಕಾಂಗ್ರೆಸ್ ಯಾವಾಗಲೂ ನಾಗರಿಕರ ವ್ಯಯಕ್ತಿಕ ಸ್ವಾತಂತ್ರ್ಯಕ್ಕಾಗಿ ನಿಂತಿದೆ ಮತ್ತು ಸಮರ್ಥಿಸಿದೆ ಎಂದರು.Disha Ravi Arrest, The moral of youth Right Attempt to undermine: DK Shivakumar outrage

ಕಾಂಗ್ರೆಸ್ ಮಾತ್ರ ವ್ಯಯಕ್ತಿಕ ಮತ್ತು ರಾಜಕಿಯ ಸ್ವಾತಂತ್ರ್ಯ ರಕ್ಷಿಸಬಲ್ಲದು

Disha Ravi Arrest, The moral of youth Right Attempt to undermine: DK Shivakumar outrage

ಭಾರತವು ಸರ್ವಾಧಿಕಾರಿ ರಾಷ್ಟ್ರವಾಗುವುದರ ವಿರುದ್ಧದ ಏಕೈಕ ಭದ್ರಕೋಟೆ ಕಾಂಗ್ರೆಸ್ ಆಗಿದೆ. ಕಾಂಗ್ರೆಸ್ ಮಾತ್ರ ತಮ್ಮ ವ್ಯಯಕ್ತಿಕ ಮತ್ತು ರಾಜಕಿಯ ಸ್ವಾತಂತ್ರ್ಯವನ್ನು ರಕ್ಷಿಸಬಲ್ಲದು ಎಂಬುದನ್ನು ನಾಗರಿಕರು ಅರಿತುಕೊಳ್ಳಬೇಕು ಎಂದು ಹೇಳಿದ್ದಾರೆ.

key words : Disha Ravi-Arrest-moral-youth-Right-Attempt-undermine-D.K. Shivakumar-outrage