ಮಹದಾಯಿ ನದಿ ನೀರುಹಂಚಿಕೆ ಕುರಿತು ಚರ್ಚೆಗೆ ಗೋವಾ ಸಿಎಂ ಬಳಿ ಸಮಯ ಕೇಳಿದ್ದೇವೆ-ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ..

Promotion

ಬೆಂಗಳೂರು,ಸೆ,10,2019(www.justkannada.in): ಮಹದಾಯಿ ನದಿ ನೀರುಹಂಚಿಕೆ ಕುರಿತು ಚರ್ಚೆಗೆ ಗೋವಾ ಸಿಎಂ ಬಳಿ ಸಮಯ ಕೇಳಿದ್ದೇವೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದರು.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಮಹದಾಯಿ ವಿಚಾರ ಚರ್ಚಿಸಲು ಗೋವಾ ಮುಖ್ಯಮಂತ್ರಿ ಜೊತೆ ಅಪಾಯಿಂಟ್ಮೆಂಟ್ ಕೇಳಿದ್ದೇವೆ. ಒಂದು ದಿನಾಂಕ ನಿಗದಿ ಮಾಡಿ ಗೋವಾ ಸಿಎಂ ಜೊತೆ ಮಹದಾಯಿ ಯೋಜನೆ ಸಂಬಂಧ ಚರ್ಚೆ ನಡೆಸ್ತೇವೆ ಎಂದರು.

ಇದೇ ತಿಂಗಳ‌ 16, 17 ರೊಳಗಾಗಿ ಗೋವಾಕ್ಕೆ ಭೇಟಿ ಮಾಡ್ತೇವೆ. ಮಹಾರಾಷ್ಟ್ರ ಮುಖ್ಯಮಂತ್ರಿ ಜೊತೆಗೂ ಮಹದಾಯಿ ಯೋಜನೆ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಸಿಎಂ ಬಿಎಸ್ ವೈ ತಿಳಿಸಿದರು.

Key words: discussion – Mahadai- river-with- Goa CM-CM BS Yeddyurappa.