ಮಾಜಿ ಇಡಿ ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ: ಯಾವುದೇ ಹಣ ಸಾಗಟವಾಗಿಲ್ಲ- ಡಿ.ಕೆ ಶಿವಕುಮಾರ್.

Promotion

ಬೆಂಗಳೂರು,ಜೂನ್,22,2022(www.justkannada.in):  ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಇಡಿ ಅಧಿಕಾರಿಗಳ ಜತೆ ಚರ್ಚಸಿದ್ದೇನೆ. ಈ ಪ್ರಕರಣದಲ್ಲಿ ಯಾವುದೇ ಹಣ ಸಾಗಾಟವಾಗಿಲ್ಲ. ಸುಮ್ಮನೇ ರಾಹುಲ್ ಗಾಂಧಿ ಅವರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್  ಹರಿಹಾಯ್ದಿದ್ದಾರೆ.

ನವದೆಹಲಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, ರಾಹುಲ್ ಗಾಂಧಿಗೆ ಕಿರುಕುಳ ಕೊಟ್ಟು ಖುಷಿ ಪಡುತ್ತಿದ್ದಾರೆ. ರಾಹುಲ್ ಗಾಂಧಿಗೆ ಬೇಕಂತಲೇ ಕಿರುಕುಳ ಕೊಡುತ್ತಿದ್ದಾರೆ.  ರಾಹುಲ್ ಗಾಂಧಿಗೆ ಸಂದೇಶ ಕೊಡಲು ಬಂದಿದ್ದೇವೆ. ಸೊನಿಯಾ ಗಾಂಧಿಗೆ ಧೈರ್ಯ ತುಂಬುತ್ತೇವೆ ಎಂದರು.

ಈ ಕುರಿತು ಮಾತನಾಡಿರುವ ಮಾಜಿ ಸಚಿವ ಕೃಷ್ಣಭೈರೇಗೌಡ, ಕರ್ನಾಟಕದಲ್ಲಿ 40 ಪರ್ಸೆಂಟ್ ಲಂಚ ಹೊಡೆಯುತ್ತಿದ್ದಾರೆ.  ಲಂಚದ ಬಗ್ಗೆ ತನಿಖೆ ಮಾಡಿದ್ರಾ..? ತನಿಖಾ ಸಂಸ್ಥೆಗಳನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

Key words: discussed – former -ED officials-no -money laundering – DK Shivakumar.