ಕೇಂದ್ರ ನಾಯಕರ ಜತೆ ಚರ್ಚಿಸಿದ್ದೇನೆ: ಶೀಘ್ರವೇ ಸಂಪುಟ ವಿಸ್ತರಣೆ- ಸಿಎಂ ಬೊಮ್ಮಾಯಿ.

Promotion

ಚಿತ್ರದುರ್ಗ,ಜನವರಿ,7,2023(www.justkannada.in): ರಾಜ್ಯ ವಿಧಾನಸಭಾ ಚುನಾವಣೆ ನಾಲ್ಕೈದು ತಿಂಗಳಿರುವಾಗ ಸಿಎಂ ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ವಿಸ್ತರಣೆಗೆ ಕೈ ಹಾಕಿದ್ದು ಸಚಿವಾಕಾಂಕ್ಷಿಗಳಿಗೆ ಸಿಹಿಸುದ್ದಿ ಸಿಕ್ಕಿದೆ.

ಹೌದು, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೇಂದ್ರ ನಾಯಕರ ಜೊತೆ ಚರ್ಚಿಸಿದ್ದೇನೆ ಶೀಘ್ರವೇ ಸಂಪುಟ ವಿಸ್ತರಣೆಯಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಈ ಕುರಿತು ಚಿತ್ರದುರ್ಗದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ರಮೇಶ್ ಜಾರಕಿಹೊಳಿ, ಕೆಎಸ್ ಈಶ್ವರಪ್ಪಸಂಪುಟ ಸೇರ್ಪಡೆ ವಿಚಾರ ಈ ಬಗ್ಗೆ ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ.  ಜಿಲ್ಲಾವಾರು ಪ್ರಾದೇಶಿಕ ಸಾಮಾಜಿಕವಾಗಿ ಎಲ್ಲಾ ಚರ್ಚೆ ನಡೆದಿದೆ. ಎಲ್ಲಾ ವಿಚಾರವನ್ನ ಕೇಂದ್ರದ ನಾಯಕರಿಗೆ ತಿಳಿಸಿದ್ದೇವೆ ಎಂದರು.

Key words: discussed –central-leaders- cabinet-expansion -CM Bommai.