ರಾಜಮೌಳಿ RRR ನೋಡಲು 2021ರವರೆಗೆ ಕಾಯ್ಬೇಕು !

Promotion

ಬೆಂಗಳೂರು, ಫೆಬ್ರವರಿ 6, 2019 (www.justkannada.in): ಬಹುನಿರೀಕ್ಷಿತ RRR ಚಿತ್ರದ ಹೊಸ ರಿಲೀಸ್​ ದಿನಾಂಕವನ್ನು ನಿರ್ದೇಶಕ ರಾಜಮೌಳಿ ಪ್ರಕಟಿಸಿದ್ದಾರೆ.

2021ರ ಜನವರಿ 8ಕ್ಕೆ ಈ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಟ್ವೀಟ್​ ಮಾಡಿದೆ.

‘ಬಾಹುಬಲಿ’ ಸಿನಿಮಾದ ನಂತರ ಸ್ಟಾರ್ ನಿರ್ದೇಶಕ ಎಸ್​.ಎಸ್​. ರಾಜಮೌಳಿ ನಿರ್ದೇಶಿಸುತ್ತಿರುವ ಸಿನಿಮಾ ‘RRR’. ರಾಜಮೌಳಿ ಅವರ ನಿರ್ದೇಶನ ಇರುವ ಕಾರಣಕ್ಕೆ ಈ ಚಿತ್ರದ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇದೆ.

ಮೊದಲ ಬಾರಿಗೆ ಜೂನಿಯರ್​ ಎನ್​ಟಿಆರ್ ಹಾಗೂ ರಾಮ್​ಚರಣ್​ ತೇಜ ಈ ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇಂತಹ ಬಹುನಿರೀಕ್ಷಿತ ಸಿನಿಮಾ ಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ.