ಕಾಲಿವುಡ್’ನ ಖ್ಯಾತ ನಿರ್ದೇಶಕ ಕೆ.ವಿ ಆನಂದ್ ನಿಧನ

Promotion

ಬೆಂಗಳೂರು, ಏಪ್ರಿಲ್ 30, 2021 (www.justkannada.in): ಕಾಲಿವುಡ್ ನ ಖ್ಯಾತ ನಿರ್ದೇಶಕ ಕೆ.ವಿ ಆನಂದ್ ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ.

1994ರಲ್ಲಿ ‘ಥೆನ್ಮಾವಿನ್​ ಕೊಂಬತ್​’ ಎಂಬ ಮಲಯಾಳಂ ಚಿತ್ರಕ್ಕೆ ಛಾಯಾಗ್ರಾಹಕರಾಗಿ ತಮ್ಮ ಸಿನಿ ಜೀವನ ಪ್ರಾರಂಭಿಸಿದ್ದರು. ಈ ಚಿತ್ರದಲ್ಲಿನ ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದರು.

2005ರಲ್ಲಿ ತಮಿಳಿನ ‘ಕನಾ ಕಂದೇನ್​’ ಸಿನಿಮಾ ಮೂಲಕ ನಿರ್ದೇಶಕರಾಗಿ ಹೊರಹೊಮ್ಮಿದರು. ಇವರ ನಿಧನದ ವಿಚಾರ ಕೇಳಿ ತಮಿಳು-ಮಲಯಾಳಂ ಚಿತ್ರರಂಗ ಕಂಬನಿ ಮಿಡಿದಿದೆ.