ಕೆಎಸ್ ಆರ್ ಟಿಸಿ ಚಾಮರಾಜನಗರ ವಿಭಾಗದಲ್ಲಿ ಶಿಶಿಕ್ಷು ತರಬೇತಿಗೆ ನೇರ ಸಂದರ್ಶನ

Promotion

ಮೈಸೂರು, ಸೆಪ್ಟೆಂಬರ್ 26, 2020 (www.justkannada.in): ಕರ್ನಾಟಕ ರಾಜ್ಯ ಸಾರಿಗೆ ಚಾಮರಾಜನಗರ ವಿಭಾಗದ ತಾಂತ್ರಿಕ ವಿಭಾಗದಲ್ಲಿ ಶಿಶಿಕ್ಷು ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಫಿಟ್ಟರ್/ಎಂಎಂವಿ ಡೀಸೆಲ್. ಮೆಕಾನಿಕಲ್ (ಆಟೋ), ಎಲೆಕ್ಟ್ರಿಷಿಯನ್ ಹಾಗೂ ಕೋಪ ವೃತ್ತಿಗಳಲ್ಲಿ ತರಬೇತಿ ಪಡೆಯಲ ಇಚ್ಚಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಭರ್ತಿ ಮಾಡಿದ ನಿಗದಿತ ಅರ್ಜಿಯೊಂದಿಗೆ ಸೆ.30ರಂದು ಬೆಳಗ್ಗೆ 8ಗಂಟೆಗೆ ಕೊಳ್ಳೇಗಾಲ ಘಟಕದಲ್ಲಿ ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಬಹುದು.