ಡಿಪ್ಲೊಮಾ ಶಿಕ್ಷಣ ಪಿಯುಸಿಗೆ ಸಮ: ಸರ್ಕಾರ ಘೋಷಣೆ.

ಬೆಂಗಳೂರು,ಸೆಪ್ಟಂಬರ್,30,2021(www.justkannada.in):  ಮೂರು ವರ್ಷಗಳ ಡಿಪ್ಲೊಮಾ ಕೋರ್ಸ್ ಅನ್ನು ಪಿಯುಸಿ ವಿದ್ಯಾರ್ಹತೆಗೆ ತತ್ಸಮಾನವೆಂದು ಸರ್ಕಾರ ಘೋಷಿಸಿದೆ.

ನೇರ ನೇಮಕಾತಿ ಅಥವಾ ಅನುಕಂಪದ ಆಧಾರದ ಮೇಲೆ ನೇಮಕಾತಿ ‌ಹೊಂದಲು ಮತ್ತು ಉನ್ನತ ಶಿಕ್ಷಣ ಪಡೆಯಲು ತಾಂತ್ರಿಕ ಶಿಕ್ಷಣ ಇಲಾಖೆಯ ಮೂರು ವರ್ಷಗಳ ಡಿಪ್ಲೊಮಾ ಶಿಕ್ಷಣ ವನ್ನು ಪಿಯುಸಿಗೆ ಸಮ ಎಂದು ಘೋಷಿಸಲಾಗಿದೆ.

ಈ‌ ವಿಷಯದಲ್ಲಿ‌ ಗೊಂದಲ ಇದ್ದ ಕಾರಣ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರು ಹಲವು ಸಭೆಗಳನ್ನು‌ ಮಾಡಿದ್ದರು. ಅವರ ಸಲಹೆ‌ ಮೇರೆಗೆ ಈ ತೀರ್ಮಾನ ಮಾಡಲಾಗಿದೆ.

2015ಕ್ಕಿಂತ ಹಿಂದಿನ‌ ವರ್ಷ ಗಳಲ್ಲಿ ಡಿಪ್ಲೊಮಾ ಉತ್ತೀರ್ಣರಾದ ವಿದ್ಯಾರ್ಥಿಗಳು ಕೆಪಿಎಸ್ ಸಿ‌ ನಡೆಸುವ ಇಲಾಖಾ‌ ಪರೀಕ್ಷೆ ಗಳ‌ ಜತೆಗೆ ಕನ್ನಡ ಭಾಷಾ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದನ್ನು ಕಡ್ಡಾಯ‌ ಮಾಡಲಾಗಿದೆ. ಇದನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

key words: Diploma Education- equivalent – PUC- Government announcement