ಮದುವೆ ಗಾಸಿಪ್’ಗಳಿಗೆ ಸ್ಪಷ್ಟನೆ ಕೊಟ್ಟ ಡಿಂಪಲ್ ಕ್ವೀನ್ ರಚಿತಾ

Promotion

ಬೆಂಗಳೂರು, ಜನವರಿ 23, 2019 (www.justkannada.in): ನಟಿ ರಚಿತಾ ರಾಮ್ ತಮ್ಮ ಮದುವೆ ಗಾಸಿಪ್ ಗಳ ಕುರಿತಂತೆ ಸ್ಪಷ್ಟನೆ ನೀಡಿದ್ದಾರೆ.

ನಿನ್ನೆ ನಿಖಿಲ್ ಕುಮಾರಸ್ವಾಮಿ ಬರ್ತ್ ಡೇಗೆ ರಚಿತಾ ರಾಮ್ ಶುಭ ಹಾರೈಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಇಬ್ಬರೂ ಮದುವೆಯಾಗುತ್ತಾರೆ ಎಂಬ ರೂಮರ್ ಗಳು ಹರಡಿದ್ದವು.

ನಿನ್ನೆ ಇಬ್ಬರ ಫೋಟೋ ನೋಡಿ ನೆಟ್ಟಿಗರು ನಿಮ್ಮ ಮದುವೆ ಯಾವಾಗ ಎಂದು ಕಾಮೆಂಟ್ ಮಾಡಿದ್ದರು. ಈ ಗಾಸಿಪ್ ಗಳಿಂದ ಬೇಸತ್ತ ರಚಿತಾ ರಾಮ್ ಇನ್ ಸ್ಟಾಗ್ರಾಂ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.

ನನ್ನ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಕಳೆದ ಕೆಲವು ದಿನಗಳಿಂದ ಹಬ್ಬುತ್ತಿರುವ ಸುದ್ದಿಗಳೆಲ್ಲವೂ ಸುಳ್ಳು. ನನ್ನ ಸಿನಿಮಾ ವಿಚಾರಗಳಾಗಲಿ, ವೈಯಕ್ತಿಕ ವಿಚಾರಗಳಾಗಲಿ ನನ್ನ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿದರೆ ಮಾತ್ರ ಸತ್ಯ ಎಂದು ಪರಿಗಣಿಸಿ ಎಂದು ಹೇಳಿದ್ದಾರೆ.