ಶಿಥಿಲಗೊಂಡ ಮೆಡಿಕಲ್ ಕಾಲೇಜು ಹಾಸ್ಟೇಲ್ ಕಟ್ಟಡ : ಸಚಿವ ಎಸ್.ಟಿ.ಸೋಮಶೇಖರ್ ಪರಿಶೀಲನೆ

Promotion

ಮೈಸೂರು,ನವೆಂಬರ್,09,2020(www.justkannada.in) : ಶಿಥಿಲಾವಸ್ಥೆ ಹಂತ ತಲುಪಿರುವ ಮೈಸೂರು ಮೆಡಿಕಲ್ ಕಾಲೇಜು ಹಾಸ್ಟೆಲ್ ಕಟ್ಟಡ ವೀಕ್ಷಿಸಿದ ಜಿಲ್ಲಾ ಉಸ್ತುವಾರಿ ಎಸ್.ಟಿ.ಸೋಮಶೇಖರ್ ಶೀಘ್ರವೇ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.kannada-journalist-media-fourth-estate-under-lossಸೋಮವಾರ ಮೈಸೂರು ಮೆಡಿಕಲ್ ಕಾಲೇಜು ಹಾಸ್ಟೆಲ್ ಗೆ ಭೇಟಿ ನೀಡಿದ ಸಚಿವರು ಕಟ್ಟಡ ಅಧಿಕಾರಿಗಳೊಂದಿಗೆ ಕಟ್ಟಡ ಪರಿಶೀಲಿಸಿದರು.

ಬಳಿಕ ಮಾತನಾಡಿ, ಮೆಡಿಕಲ್ ಕಾಲೇಜು ಹಾಸ್ಟೆಲ್ ಕಟ್ಟಡ ಮಳೆ ಬಂದರೆ ಸೋರುತ್ತಿದ್ದು, ಈ ಕಟ್ಟಡದಲ್ಲಿ 400ಕ್ಕೂ ಹೆಚ್ಚು ಮೆಡಿಕಲ್ ವಿದ್ಯಾರ್ಥಿಗಳಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಿಂದೆ 2018ರಲ್ಲಿ ಕಾಮಗಾರಿಗೆ 7 ಕೋಟಿ ಅಂದಾಜು ಮಾಡಲಾಗಿತ್ತು.  ಈಗ ಮತ್ತೆ 5 ರಿಂದ 10 % ರಷ್ಟು ಹೆಚ್ಚಿನ ಹಣ ಬೇಕಾಗಬಹುದು. ವೈದ್ಯಕೀಯ ವಿದ್ಯಾರ್ಥಿಗಳು ಇಲ್ಲಿ ಉಳಿಯಲು ಸಾಧ್ಯವಿಲ್ಲ. ಕೂಡಲೇ ಸಮಸ್ಯೆ ಬಗೆಹರಿಸುತ್ತೇವೆ. ಆರೋಗ್ಯ ಸಚಿವರ ಜೊತೆ ಚರ್ಚಿಸಿ ಕೂಡಲೇ ಕ್ರಮ ಕೈಗೊಳ್ಳುತ್ತೇವೆ ಎಂದರು.

key words : Dilapidated-Medical-College-Hostel-Building-Minister-S.T.Somashekhar-reviewed