ಏಕದಿನ ಕ್ರಿಕೆಟ್’ಗೆ ಇಂದು ಧೋನಿ ವಿದಾಯ ಘೋಷಣೆ ಸಾಧ್ಯತೆ ?

Promotion

ಬೆಂಗಳೂರು, ಜುಲೈ 11, 2019 (www.justkannada.in): ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಇಂದು ಏಕದಿನ ಪಂದ್ಯಗಳಿಗೆ ವಿದಾಯ ಘೋಷಿಸುವ ಸಾಧ್ಯತೆ ಇದೆ.

ಮಹೇಂದ್ರ ಸಿಂಗ್ ಧೋನಿ ಈ ಹಿಂದೆ ಯಾರೂ ಊಹಿಸದ ರೀತಿಯಲ್ಲಿ ಮೂರು ಮಾದರಿಯ ಕ್ರಿಕೆಟ್​ನ ನಾಯಕತ್ವಕ್ಕೆ ಏಕಾಏಕಿ ದಿಢೀರನೇ ನಿವೃತ್ತಿ ಘೋಷಿಸಿದ್ದರು.

ಧೋನಿ ನಿವೃತ್ತಿಯ ನಂತರ ಈ ಸ್ಥಾನ ವಿರಾಟ್​ ಕೊಹ್ಲಿಗೆ ಅನಾಯಾಸವಾಗಿ ಒಲಿದುಬಂದಿತ್ತು. ಧೋನಿ ನಾಯಕತ್ವಕ್ಕೆ ವಿದಾಯ ನೀಡಿದಂತೆ ಟೆಸ್ಟ್​ ಕ್ರಿಕೆಟ್​ಗೂ ದಿಢೀರೆಂದು ವಿದಾಯ ಘೋಷಿಸಿದ್ದರು.