ಕುಡಿಯುವ ನೀರು, ಕೊಹ್ಲಿ ಕಾರು ತೊಳೆಯಲು ಬಳಕೆ: ದಂಡ ವಿಧಿಸಿದ ಅಧಿಕಾರಿಗಳು

Promotion

ಗುರುಗ್ರಾಮ, ಜೂನ್ 07, 2019 (www.justkannada.in): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಆದರೆ, ಗುರುಗ್ರಾಮದಲ್ಲಿರುವ ಕೊಹ್ಲಿ ಮನೆಯಲ್ಲಿ ಅವರ ಕಾರುಗಳನ್ನು ತೊಳೆಯಲು ಕುಡಿಯುವ ನೀರು ಬಳಕೆ ಮಾಡಿದ ಕಾರಣಕ್ಕೆ ಅಧಿಕಾರಿಗಳು ದಂಡ ವಿಧಿಸಿದ್ದಾರೆ.

ಗುರುಗ್ರಾಮದ DLF Phase-1ನಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮನೆಯಲ್ಲಿ ಅಲ್ಲಿನ ಕೆಲಸಗಾರರು ನಿಯಮ ಉಲ್ಲಂಘಿಸಿ ಕಾರುಗಳನ್ನು ತೊಳೆಯಲು ಕುಡಿಯುವ ನೀರನ್ನು ಬಳಸಿದ ಕಾರಣ ಮುನಿಸಿಪಲ್ ಕಾರ್ಪೋರೇಶನ್ ಅಧಿಕಾರಿಗಳು 500 ರೂ. ದಂಡ ವಿಧಿಸಿದ್ದು, ದೀಪಕ್ ಎಂಬ ಕೆಲಸಗಾರನ ಹೆಸರಿನಲ್ಲಿ ಚಲನ್ ನೀಡಿದ್ದಾರೆ.