ಗೆದ್ದಲು ಕಟ್ಟಿದ ಮನೆಯಲ್ಲಿ ಹಾವು ವಾಸ ಮಾಡುವುದಲ್ಲ- ಬಿಎಸ್ ವೈ ವಿರೋಧಿ ಬಣಕ್ಕೆ ದಿಂಗಾಲೇಶ್ವರ ಸ್ವಾಮೀಜಿ  ಟಾಂಗ್.

ಬೆಂಗಳೂರು,ಜುಲೈ,25,2021(www.justkannada.in):  ಸಿಎಂ ಬದಲಾವಣೆ ವಿಚಾರ ಸಂಬಂಧ ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರೋಧಿ ಬಣಕ್ಕೆ ಟಾಂಗ್ ನೀಡಿರುವ ಬಾಲೆಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ, ಸ್ವಪಕ್ಷದ ವಿರೋಧಿಗಳನ್ನು ಹೈಕಮಾಂಡ್ ನಿಯಂತ್ರಿಸಿಲ್ಲ ಎಂಬ ಕಾರಣಕ್ಕೆ ಮಠಾಧೀಶರಿಗೆ ನೋವಾಗಿದೆ. ಪಕ್ಷ ಅಧಿಕಾರಕ್ಕೆ ತರಲು ಯಡಿಯೂರಪ್ಪ ಬೇಕು. ಅಧಿಕಾರ ನಡೆಸಲು ನಾನು-ನೀವು ಎಂದು ಬೇರೆಯವರು ಮುಂದೆ ಬರುತ್ತಾರೆ. ಯಾರೋ ಕಟ್ಟಿದ ಮನೆಯಲ್ಲಿ ಇನ್ಯಾರೋ ಇರೋದಲ್ಲ. ಗೆದ್ದಲು ಕಟ್ಟಿದ ಮನೆಯಲ್ಲಿ ಹಾವು ವಾಸ ಮಾಡುವುದಲ್ಲ ಎಂದು ಹೇಳಿದರು.jk

ಅರಮನೆ ಮೈದಾನದಲ್ಲಿ  ನಡೆದ ಮಠಾಧೀಶರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ “ದಿಂಗಾಲೇಶ್ವರ ಶ್ರೀಗಳು, ನಾಯಕತ್ವ ಬದಲಾವಣೆ ವಿಚಾರವಾಗಿ ಆಡಿಯೋ ತುಣುಕು ಹರಿದಾಡಿದ ಪರಿಣಾಮವಾಗಿ ಈ ಸಮಾವೇಶ ಸೃಷ್ಟಿಯಾಗಿದೆ. ಯಾರ ಸಲಹೆ, ಪ್ರಚೋದನೆ, ಒತ್ತಡಕ್ಕೆ ಮಣಿದು ಈ ಸಮಾವೇಶ ಮಾಡುತ್ತಿಲ್ಲ ಎಂದರು.

ಸಿಎಂ ಬಿಎಸ್ ಯಡಿಯೂರಪ್ಪ  ನೆರೆ ಪರಿಸ್ಥಿತಿ ವೇಳೆ 45 ದಿನಗಳ ಕಾಲ ಒಬ್ಬರೇ ಕೆಲಸ ಮಾಡಿದ್ದರು. ಅನುದಾನಕ್ಕಾಗಿ ಮಠಾಧೀಶರು ಕೈಚಾಚಿದವರಲ್ಲ. ಸಿಎಂ ಬಿಎಸ್ ಯಡಿಯೂರಪ್ಪ ಅವರೇ ಮಠಮಾನ್ಯಗಳಿಗೆ ಅನುದಾನ ನೀಡಿದರು. ನಂತರ ಹೆಚ್.ಡಿ ಕುಮಾರಸ್ವಾಮಿ ಅನುದಾನ ನೀಡಿದರು. ಬಳಿಕ ಸಿದ್ಧರಾಮಯ್ಯ ಅವರೂ ಸಹ ಅನುದಾನ ನೀಡಿದ್ದರು. ಆದರೆ ಮಠಾಧೀಶರು ಎಂದೂ ಅನುದಾನಕ್ಕೆ ಕೈಚಾಚಿದವರಲ್ಲ ಎಂದರು.

Key words: Dhingaleshwara Swamiji – CM -BS Yeddyurappa-batting-bangalore