ಧವನ್ ಗಾಯಗೊಂಡರೂ ಆಡುವ ಆಸೆ ಕಮರಿಲ್ಲ ! ಅದಕ್ಕೆ ತಂಡದೊಂದಿಗಿದ್ದಾರೆ ಎಂದ ಕೊಹ್ಲಿ..

Promotion

ಲಂಡನ್, ಜೂನ್ 15, 2019 (www.justkannada.in): ಗಾಯದ ಸಮಸ್ಯೆಯಿಂದ ಮೂರು ವಾರಗಳ ವಿಶ್ರಾಂತಿ ಪಡೆಯಲು ಸೂಚಿಸಿದ್ದರೂ ಶಿಖರ್ ಧವನ್ ಇನ್ನೂ ತಂಡದೊಂದಿಗೇ ಇದ್ದಾರೆ. ಈ ಪ್ರಶ್ನೆಗೆ ನಾಯಕ ಕೊಹ್ಲಿ ಉತ್ತರಿಸಿದ್ದಾರೆ.

‘ಧವನ್ ಗೆ ಆಡಬೇಕು ಎಂಬ ಆಸೆ ತುಂಬಾ ಇದೆ. ಬಹುಶಃ ಅವರ ಈ ಹತಾಶೆ, ಅಭಿಲಾಷೆಯಿಂದ ಅವರು ಬೇಗನೇ ಗುಣಮುಖರಾಗಬಹುದು. ಇದರಿಂದ ಅವರು ಸೆಮಿಫೈನಲ್ ಹಂತದ ವೇಳೆಗೆ ಆಡಲು ಸಮರ್ಥರಾಗಬಹುದು.

ಇದಕ್ಕಾಗಿಯೇ ಅವರನ್ನು ಇನ್ನೂ ತಂಡದಲ್ಲಿಯೇ ಉಳಿಸಿಕೊಂಡಿದ್ದೇವೆ’ ಎಂದು ಕೊಹ್ಲಿ ಸ್ಪಷ್ಟನೆ ನೀಡಿದ್ದಾರೆ.