ಟಾಟಾಏಸ್ ಮತ್ತು ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು: 7 ಮಂದಿಗೆ ಗಾಯ….

Promotion

ಧಾರವಾಡ,ಜ,14,2020(www.justkannada.in):  ಕಾರು, ಬೈಕ್ ಮತ್ತು ಟಾಟಾ ಏಸ್ ನಡುವೆ ಸರಣಿ ಅಪಘಾತ ಸಂಭವಿಸಿ ಓರ್ವ ಸಾವನ್ನಪ್ಪಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡ ನಗರದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಟಾಟಾ ಏಸ್ ಚಾಲಕ ಲಕ್ಷ್ಮಣ್ ಗೌಡ ಪಾಟೀಲ್(35) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದ ಬಳಿಕ ಎದುರಿಗೆ ಬರುತ್ತಿದ್ದ  ಟಾಟಾಏಸ್ ಮತ್ತು ಬೈಕ್ ಗೆಡಿಕ್ಕಿ ಹೊಡೆದು ಪಲ್ಟಿಯಾಗಿದೆ.

ಘಟನೆಯಲ್ಲಿ ಟಾಟಾಏಸ್  ಚಾಲಕ ಲಕ್ಷ್ಮಣ್ ಗೌಡ ಪಾಟೀಲ್ ಮೃತಪಟ್ಟಿದ್ದು  7 ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನ ಆಸ್ಪತ್ರಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ . ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: dharwad- Car- collision – Tata Ace –bike-death.