ಕೆಲಸ ಹೋಗುತ್ತೆಂದು ಹೆದರಿ ಪತ್ನಿ ಮಗಳಿಗೆ ವಿಷ ಹಾಕಿ ನಂತರ ತಾನೂ ನೇಣಿಗೆ ಶರಣಾದ ಖಾಸಗಿ ಕಂಪನಿ ನೌಕರ…

Promotion

ದಾರವಾಢ,ಜು,25,2020(www.justkannada.in): ಕೊರೋನಾ ಹಿನ್ನೆಲೆ ಕೆಲಸ ಹೋಗುತ್ತದೆ ಎಂದು ಹೆದರಿ ವ್ಯಕ್ತಿಯೋರ್ವ ತನ್ನ ಪತ್ನಿ ಹಾಗೂ ಮಗಳಿಗೆ ವಿಷ ಹಾಕಿ ನಂತರ ತಾನೂ ನೇಣಿಗೆ ಶರಣಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ.jk-logo-justkannada-logo

ಧಾರವಾಡದ ಮೆಹಬೂಬ್ ನಗರದಲ್ಲಿ ಈ ಘಟನೆ ನಡೆದಿದೆ. ಮೌನೀಶ್(36), ಪತ್ನಿ ಅರ್ಪಿತಾ(28), 2 ವರ್ಷದ ಸುಕೃತ ಮೃತಪಟ್ಟವರು. ಮೌನೀಶ್ ಪತ್ತಾರ್ ರೋಣ ತಾಲ್ಲೂಕಿನ ಅಸೋಟೆ ನಿವಾಸಿಯಾಗಿದ್ದು ಮಾರ್ಕೋಪೋಲೊ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಕೊರೋನಾ ಹಿನ್ನೆಲೆ ನೌಕರರನ್ನ ಕೆಲಸದಿಂದ ತೆಗೆಯಲು ಕಂಪನಿ ನಿರ್ಧರಿಸಿತ್ತು ಎನ್ನಲಾಗಿದೆ.dharawad-employee-suicide-poison-wife

ಹೀಗಾಗಿ ಉದ್ಯೋಗ ವೇತನ ಕಡಿತಕ್ಕೆ ಹೆದರಿ ಮೌನೀಶ್ ತನ್ನ ಪತ್ನಿ ಹಾಗೂ ಪುತ್ರಿಗೆವಿಷ ನೀಡಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: dharawad-employee- suicide-poison- wife