ಟ್ವಿಟರ್’ನಲ್ಲಿ ಹೊಸ ದಾಖಲೆ ಬರೆದ ಧನುಷ್

Promotion

ಬೆಂಗಳೂರು, ಸೆಪ್ಟೆಂಬರ್ 15, 2022 (www.justkannada.in): ನಟ ಧನುಷ್ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಹೌದು. ಟ್ವಿಟರ್‌’ನಲ್ಲಿ 1 ಕೋಟಿ 10 ಲಕ್ಷ ಜನ ಫಾಲೋವರ್‌ಗಳನ್ನು ಹೊಂದುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ಇಷ್ಟು ಫಾಲೋವರ್‌ಗಳನ್ನು ಹೊಂದಿರುವ ತಮಿಳಿನ ಏಕೈಕ ನಟ ಮತ್ತು ದಕ್ಷಿಣ ಸಿನಿಮಾ ರಂಗದಲ್ಲೇ ಎರಡನೇ ನಟ ಎಂಬ ದಾಖಲೆಗೆ ಧನುಷ್ ಪಾತ್ರರಾಗಿದ್ದಾರೆ.

ಅಂದಹಾಗೆ ಧನುಷ್‌ ಫೇಸ್‌ಬುಕ್‌ನಲ್ಲಿ 69 ಲಕ್ಷ‌ ಮತ್ತು ಇನ್‌ಸ್ಟಾಗ್ರಾಂನಲ್ಲಿ 49 ಲಕ್ಷ ಫಾಲೋವರ್‌ಗಳನ್ನು ಹೊಂದಿದ್ದಾರೆ.