ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಸ್ಥಗಿತ: ಕಾವೇರಿ ವಿಚಾರದಲ್ಲಿ ರೈತರನ್ನು ಬಲಿ ಕೊಡುತ್ತಿದ್ದಾರೆ- ಎಂಎಲ್ ಸಿ ರವಿಕುಮಾರ್

Promotion

ಕೋಲಾರ,ಸೆಪ್ಟಂಬರ್,16,2023(www.justkannada.in): ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಸ್ಥಗಿತವಾಗಿದೆ. ಕಾವೇರಿ ವಿಚಾರದಲ್ಲಿ ರೈತರನ್ನು ಬಲಿ ಕೊಡುತ್ತಿದ್ದಾರೆ ಎಂದು ಬಿಜೆಪಿ ಎಂಎಲ್ ಸಿ ರವಿ ಕುಮಾರ್ ವಾಗ್ದಾಳಿ ನಡೆಸಿದರು.

ಕೋಲಾರದಲ್ಲಿ ಇಂದು ಮಾತನಾಡಿದ ರವಿಕುಮಾರ್, ನೀರಿಗೆ ಅಭಾವವಿದ್ದರೂ ತಮಿಳುನಾಡಿಗೆ  ನೀರು ಹರಿಸುತ್ತಿದ್ದಾರೆ.  ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 5 ಗ್ಯಾರಂಟಿ ಬಿಟ್ಟು ಬೇರೆ ಯೋಜನೆಗಳು ಇಲ್ಲ.  ಶೇ.20ರಷ್ಟು ಮಹಿಳೆಯರಿಗೂ ಹಣ ನೀಡಿಲ್ಲ. ಬಸ್ ಇಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಕರೆಂಟ್ ನಬಿಲ್ ಮದ್ಯದ ದರ ಏರಿಕೆ ಮಾಡಿದ್ದಾರೆ. ಸಿಎಂಗೆ ಶಾಸಕರು ಪತ್ರ ಬರೆದಿದ್ದಾರೆ. 3 ತಿಂಗಳಲ್ಲಿ ಜನರ ವಿರೋಧ ಎದುರಿಸುತ್ತಿದ್ದಾರೆ ಎಂದು ಗುಡುಗಿದರು.

 

ಮೂರು ಡಿಸಿಎಂ ಹುದ್ದೆ ಸೃಷ್ಠಿ ವಿಚಾರ ಕುರಿತು ಪ್ರತಿಕ್ರಿಯಿಸಿದ ರವಿಕುಮಾರ್, ರಾಜಣ್ಣ ಹೇಳಿರೋ‍ದು 3 ಡಿಸಿಎಂ ಹುದ್ದೆ ನೀಡುವ ಬಗ್ಗೆ. ಆದರೆ ಯಾರ ಮನಸ್ಸಿನಲ್ಲಿ  ಎಷ್ಟು ಸ್ಥಾನ ಇದೆ ಗೊತ್ತಿಲ್ಲ. ಎರಡುವರೆ ವರ್ಷಕ್ಕಾಗಿ ಡಿಕೆ ಶಿವಕುಮಾರ್ ಕಾಯುತ್ತಿದ್ದಾರೆ ಎಂದು ಲೇವಡಿ ಮಾಡಿದರು.

Key words: Development –stop- after -Congress – power- MLC Ravikumar