ಆರೋಗ್ಯ ಇಲಾಖೆ ಲೋಗೋ ವಿನ್ಯಾಸ ಮಾಡಿ, 50 ಸಾವಿರ ರೂ. ಬಹುಮಾನ ಗೆಲ್ಲಿ !

Promotion

ಬೆಂಗಳೂರು, ಡಿಸೆಂಬರ್ 17, 2021 (www.justkannada.in): ರಾಜ್ಯ ಆರೋಗ್ಯ ಇಲಾಖೆಯ ಲಾಂಛನ(ಲೋಗೋ) ವಿನ್ಯಾಸಗೊಳಿಸಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ವಿಶೇಷವಾಗಿ ಲೋಗೋ ವಿನ್ಯಾಸಗೊಳಿಸಿ ಅದು ಆಯ್ಕೆಯಾದರೆ ಆ ಕಲಾವಿದನಿಗೆ 50 ಸಾವಿರ ರೂ ಸಿಗಲಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಆರೋಗ್ಯ ಇಲಾಖೆಯ ಲಾಂಛನ ವಿನ್ಯಾಸದ ವಿಧಾನ ಅಗತ್ಯ ಆರೋಗ್ಯ ಸೇವೆಯ ಉದ್ದೇಶಗಳನ್ನು ಒಳಗೊಂಡಿರಬೇಕು. ಲೋಗೋ ವಿನ್ಯಾಸವು ವೆಕ್ಟರ್ ಗಳ ರೂಪದಲ್ಲಿ ಇರಬೇಕಾಗಿದ್ದು, 8×8 ಇಂಚಿನ ಅಳತೆಯನ್ನು ಹೊಂದಿರಬೇಕು.

ಈ ರೀತಿಯಾಗಿ ನೂತನ ರೀತಿಯಲ್ಲಿ ಆರೋಗ್ಯ ಇಲಾಖೆಯ ಲಾಂಛನ ವಿನ್ಯಾಸಗೊಳಿಸಿದವರು, ಡಿಸೆಂಬರ್ 30, 2021ರ ಒಳಗಾಗಿ [email protected] ಇ-ಮಿಂಚಂಚೆಗೆ ಕಳುಹಿಸಿಕೊಡುವಂತೆ ತಿಳಿಸಲಾಗಿದೆ.