“ಡಿನೋಟಿಫಿಕೇಷನ್ ಪ್ರಕರಣ: ಸಿಎಂ ಬಿ.ಎಸ್.ವೈ, ಮುರುಗೇಶ್ ನಿರಾಣಿ ಬಂಧಿಸಿದಂತೆ ಸುಪ್ರೀಂ ಸೂಚನೆ”

Promotion

ಬೆಂಗಳೂರು,ಜನವರಿ,27,2021(www.justkannada.in) : ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಸಚಿವ ಮುರುಗೇಶ್ ನಿರಾಣಿ ಬಂಧಿಸಿದಂತೆ ಸುಪ್ರೀಕೋರ್ಟ್ ತನಿಖಾಧಿಕಾರಿಗಳಿಗೆ ಸೂಚಿಸಿದೆ.Denotification-Case-BSY-Murugesh Nirani-bound-Supreme-Notice 

 

ದೇವನಹಳ್ಳಿ ವಸತಿ ಯೋಜನೆ ಭೂಮಿ ಹಿಂಪಡೆಯಲಾಗಿತ್ತು. ಸಿಎಂ ಬಿಎಸ್ ವೈ ಮತ್ತು ಸಚಿವ ಮುರುಗೇಶ್ ನಿರಾಣಿ ವಿರುದ್ಧ ನಕಲಿ ದಾಖಲೆ ಸೃಷ್ಠಿಸಿ ಜಮೀನು ಹಿಂಪಡೆದ ಆರೋಪ ಮಾಡಲಾಗಿತ್ತು. ಈ ಕುರಿತು ಉದ್ಯಮಿ ಆಲಂಪಾಷಾ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಇನ್ನು ಪ್ರಕರಣ ರದ್ದುಗೊಳಿಸುವಂತೆ ಕೋರಿ ಸಿಎಂ ಬಿಎಸ್ ವೈ ಹಾಗೂ ಸಚಿವ ಮುರುಗೇಶ್ ನಿರಾಣಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಪ್ರಕರಣಕ್ಕೆ ತಡೆ ನೀಡಲು ನಿರಾಕರಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಸಿಎಂ ಬಿಎಸ್ ವೈ ಹಾಗೂ ಮುರುಗೇಶ್ ನಿರಾಣಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.

ಇದೀಗ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿ ಸಿಎಂ ಬಿಎಸ್ ವೈ ಹಾಗೂ ಮುರುಗೇಶ್ ನಿರಾಣಿ ಬಂಧಿಸದಂತೆ ತನಿಖಾಧಿಕಾರಿಗಳಿಗೆ ಸೂಚನೆ ನೀಡಿದೆ.

key words : Denotification-Case-BSY-Murugesh Nirani-bound-Supreme-Notice