‘ದ್ರೋಣ’ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆಗ್ರಹ: ಮೈಸೂರಿನಲ್ಲಿ ವಾಟಾಳ್ ನಾಗರಾಜ್ ವಿನೂತನ ಪ್ರತಿಭಟನೆ…

ಮೈಸೂರು,ಮೇ,1,2019(www.justkannada.in):  ಕಳೆದ  ಮೂರು ದಿನಗಳ ಹಿಂದೆ  ಮೃತಪಟ್ಟ ವಿಶ್ವವಿಖ್ಯಾತ ಮೈಸೂರು ದಸರಾ ಆನೆ ದ್ರೋಣ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಿ ಕನ್ನಡ ಚಳವಳಿ ವಾಟಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ವಿನೂತನ ಪ್ರತಿಭಟನೆ ನಡೆಸಿದರು.

ಕೋಟೆ ಆಂಜುನೇಯ ಸ್ವಾಮಿ ದೇವಾಲಯದ ದ್ವಾರದ ಅರಮನೆ ಬಾಗಿಲಲ್ಲಿ ಮಲಗಿ ಕನ್ನಡ ಪರ ಹೋರಾಟಗಾರ ವಾಟಳ್ ನಾಗರಾಜ್ ಪ್ರತಿಭಟನೆ ನಡೆಸಿದರು. ಆನೆಗಳನ್ನು ದಸರಾ ಸಂದರ್ಭದಲ್ಲಿ ಮಾತ್ರ ಚೆನ್ನಾಗಿ ಪೋಷಣೆ ಮಾಡಿ ಪೋಷಕಾಂಶಗಳ ಆಹಾರ ನೀಡಿ ನೋಡಿ ಕೊಳ್ಳುತ್ತಾರೆ. ದ್ರೋಣ ಆನೆ ಸಾಯುವ ಸಮಯದಲ್ಲಿ ಯಾವ ರೀತಿ ಆಹಾರ ನೀಡಿದರು ಹಾಗೂ ಯಾವ ರೀತಿ ನೋಡಿ ಕೊಳ್ಳುತ್ತಿದ್ದರು ಎಂಬುದು ಸಮಗ್ರ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಹಾಗೆಯೇ ಬಂಡೀಪುರ ರಸ್ತೆ ನಿಷೇಧವನ್ನು ಯಾವುದೇ ಕಾರಣಕ್ಕೂ ತೆಗೆಯಬಾರದು. ವೈನಾಡಿನಲ್ಲಿ ರಾಹುಲ್‌ ಗಾಂಧಿಯವರು ರಸ್ತೆ ನಿಷೇಧವನ್ನು ತೆಗೆಸುತ್ತೇನೆ ಎಂದು ಹೇಳಿರುವುದು ಸರಿಯಾದ ಕ್ರಮ ಅಲ್ಲ ಎಂದ ವಾಟಾಳ್ ನಾಗರಾಜು ಕಿಡಿಕಾರಿದರು.

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿಯಲ್ಲಿ ಪಾಲ್ಗೊಂಡು ಹೆಜ್ಜೆ ಹಾಕಿದ್ದ ಆನೆ ದ್ರೋಣ ಇತ್ತೀಚೆಗೆ ನಿಧನವಾಗಿದ್ದು, ಈ ಸಂಬಂಧ ಇದು ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಆನೆ ಸಾವನ್ನಪ್ಪಿದೆ ಎಂದು ಆರೋಪ ಕೇಳಿ ಬಂದಿತ್ತು.

Key words: Demand – high level -investigation -death –Drona- Vatal Nagaraj – protest -Mysore.