ಡೆಲ್ಟಾ ಪ್ಲಸ್ ವೈರಸ್: ರಾಜ್ಯದ ಸೋಂಕಿತರಿಗೆ ಗಂಭೀರ ಸಮಸ್ಯೆ ಇಲ್ಲ-ಆರೋಗ್ಯ ಸಚಿವ ಸುಧಾಕರ್.

Promotion

ಬೆಂಗಳೂರು,ಜೂನ್,25,2021(www.justkannada.in): ರಾಜ್ಯದಲ್ಲಿ ಡೆಲ್ಟಾ ಪ್ಲಸ್ ವೈರಸ್ ಭೀತಿ ಎದುರಾಗಿದ್ದು ಆದರೆ ಸೋಂಕಿತರಿಗೆ ಗಂಭೀರ ಸಮಸ್ಯೆ ಇಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.jk

ಈ ಸಂಬಂಧ ಮಾಧ್ಯಮಗಳ ಜತೆ ಮಾತನಾಡಿದ ಡಾ.ಕೆ.ಸುಧಾಕರ್, ಡೆಲ್ಟಾ ಪ್ಲಸ್  ವೈರಸ್ ಸೋಂಕಿನ ಪ್ರಕರಣ ಈವರೆಗೆ ಪತ್ತೆಯಾಗಿರುವುದು 2 ಕೇಸ್. ಈ ಪೈಕಿ  ಮೈಸೂರು ಸೋಂಕಿತರು ಗುಣಮುಖರಾಗಿದ್ದಾರೆ.  ಬೆಂಗಳೂರು ಸೋಂಕಿತರಿಗೆ  ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಸಂಪರ್ಕಿತರಿಗೆ ಸೋಂಕು ಹರಡಿಲ್ಲ ಎಂದು ತಿಳಿಸಿದರು.

ಗಡಿಭಾಗದಲ್ಲಿ ಸೋಂಕು ಹರಡುವ ಭೀತಿ ಹೆಚ್ಚಾಗಿದೆ. ಕೇರಳದಲ್ಲಿ ಶೇ.10 ರಷ್ಟು ಸೋಂಕು ಇದೆ.  ಕೇರಳ, ಮಹಾರಾಷ್ಟ್ರ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಲಾಗುತ್ತದೆ. ನೆರೆ ರಾಜ್ಯದಿಂದ ಬರುವವರಿಗೆ ರ್ಯಾಂಡಮ್ ಟೆಸ್ಟ್ ಮಾಡಲಾಗುತ್ತಿದೆ . ಗಡಿ ಮುಚ್ಚುವ ಯಾವುದೇ ಯೋಚನೆ ಇಲ್ಲ ಎಂದರು.

ಇನ್ನು ಬೆಂಗಳೂರು, ಮೈಸೂರು ಶಿವಮೊಗ್ಗ ಸೇರಿ 6 ಜಿನೋಮ್ ಲ್ಯಾನ್ ಆರಂಭಿಸಲು  ಚಿಂತಿಸಲಾಗಿದೆ ಎಂದು ಸಚಿವ ಸುಧಾಕರ್ ತಿಳಿಸಿದರು.

Key words: Delta Plus –Virus-no serious- problem – infected-Health Minister -Sudhakar.