ಹುಣಸೂರಿನಲ್ಲಿ ಬೈಕ್ ಡಿಕ್ಕಿ ಹೊಡೆದು ಜಿಂಕೆ ಸಾವು, ಸವಾರನ ಸ್ಥಿತಿ ಗಂಭೀರ

Promotion

ಮೈಸೂರು,ಅಕ್ಟೋಬರ್,24,2020(www.justkannada.in) : ಹುಣಸೂರು-ನಾಗರಹೊಳೆ ರಸ್ತೆಯ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ಬಳಿ ರಸ್ತೆದಾಟುತ್ತಿದ್ದ ಜಿಂಕೆಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಜಿಂಕೆ ಸಾವನ್ನಪ್ಪಿದೆ.jk-logo-justkannada-logo

ಗಾಯಗೊಂಡ ಯುವಕನನ್ನು ಹುಣಸೂರು ನಗರದ ಕಲ್ಕುಣಿಕೆ ನಿವಾಸಿ ಸಂತೋಷ್ ಎಂದು ಗುರುತಿಸಲಾಗಿದೆ. ಸಂತೋಷ್ ತಾಲೂಕಿನ ವಿವಿಧ ಪಡಿತರ ಕೇಂದ್ರಗಳಲ್ಲಿ ಕಂಪ್ಯೂಟರ್ ಕೆಲಸ ನಿರ್ವಹಿಸುತ್ತಿದ್ದ. ಭರತವಾಡಿಯ ಪಡಿತರ ಕೇಂದ್ರದಿಂದ ನಗರದ ಕಡೆಗೆ ವಾಪಾಸ್ ಬರುತ್ತಿದ್ದಾಗ ನಾಗಾಪುರ ಬಳಿಯ ಉಡ್ ಲಾಟ್ ಕಡೆಯಿಂದ ಜಿಂಕೆ ಹೊರಬಂದು ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಢಿಕ್ಕಿ ಹೊಡೆದಿದೆ.

Deer,death,bike,rider,serious,condition

ಅಪಘಾತದ ರಭಸಕ್ಕೆ ಜಿಂಕೆ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಬೈಕ್ ಸವಾರ ಸಂತೋಷ್ ಗೆ ತಲೆಗೆ ತೀವ್ರಪೆಟ್ಟು ಬಿದ್ದಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

key words : Deer-death-bike-rider-serious-condition