ಕದ್ದುಮುಚ್ಚಿ ಪಟಾಕಿ ಸಿಡಿಸಿದ್ರೆ ಕ್ರಮ- ಸಚಿವ ಡಾ.ಕೆ ಸುಧಾಕರ್…

Promotion

ಬೆಂಗಳೂರು, ನವೆಂಬರ್,6,2020(www.justkannada.in):  ಕೊರೋನಾ ಹಿನ್ನೆಲೆ ರಾಜ್ಯದಲ್ಲಿ ಪಟಾಕಿ ನಿಷೇಧ ಮಾಡುವುದಕ್ಕೆ ಸರ್ಕಾರ ನಿರ್ಧರಿಸಿದ್ದು  ಪಟಾಕಿ ನಿಷೇಧದ ಬಗ್ಗೆ ಈಗಾಗಲೇ ಸಿಎಂ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.jk-logo-justkannada-logo

ಈ ಸಂಬಂಧ ಮಾತನಾಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಕೋವಿಡ್​ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಈ ಬಾರಿ ಪಟಾಕಿ ಹೊಡೆಯುವುದನ್ನು ನಿಷೇಧಿಸಿ ಮುಖ್ಯಮಂತ್ರಿ ಘೋಷಣೆ ಮಾಡಿದ್ದಾರೆ. ಈ ಹಿನ್ನಲೆ ಈ ಬಾರಿ ಯಾರು ಪಟಾಕಿ ಹೊಡೆಯಬಾರದು. ಒಂದು ವೇಳೆ ಕದ್ದುಮುಚ್ಚಿ ಪಟಾಕಿ ಹೊಡೆದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹಬ್ಬಗಳ ಸಾಲಿನ ಜತೆ ಚಳಿಗಾಲ ಕೂಡ ಆರಂಭವಾಗಲಿದೆ. ನಿಯಮ ಉಲ್ಲಂಘಿಸಿ ಪಟಾಕಿ ಹೊಡೆದರೆ ದಂಡ ಹಾಕಬೇಕೋ ಇನ್ನೇನೂ ಕ್ರಮ‌ಕೈಗೊಳ್ಳಬೇಕು ಎನ್ನುವ ಬಗ್ಗೆ ನಾಳೆ ರೂಪರೇಷ ಸಿದ್ಧಪಡಿಸಲಾಗುವುದು ಎಂದು ಸಚಿವ ಸುಧಾಕರ್ ತಿಳಿಸಿದರು.

Key words: deepavali- Fireworks- action- Minister- Dr K Sudhakar.