ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಇಳಿಕೆ

Promotion

ನವದೆಹಲಿ,ಫೆಬ್ರವರಿ,1,2022(www.justkannada.in): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡಿಸುತ್ತಿದ್ದು ಬಜೆಟ್ ಮಂಡನೆಗೂ ಮುನ್ನವೇ ಗ್ರಾಹಕರಿಗೆ ಬಂಪರ್ ಕೊಡುಗೆ ನೀಡಲಾಗಿದೆ.

ತೈಲ ಮಾರುಕಟ್ಟೆ ಕಂಪನಿಗಳು (OMC ಗಳು) ಮಂಗಳವಾರ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (LPG) ಸಿಲಿಂಡರ್ ಬೆಲೆಗಳನ್ನು ಬಿಡುಗಡೆ ಮಾಡಿದೆ. ವಾಣಿಜ್ಯಿ ಬಳಕೆಯೆ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ ನ ಬೆಲೆಯನ್ನು  91.50 ರೂ. ಇಳಿಕೆ ಮಾಡಲಾಗಿದೆ.

‘ಮುಂಬರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರವು ಬೆಲೆಯಲ್ಲಿ ಹೆಚ್ಚಳವನ್ನು ಮಾಡದೇ ಇರುವುದಕ್ಕೆ ಮುಂದಾಗಿದೆ.  ವಾಣಿಜ್ಯ ಸಿಲಿಂಡರ್ ಈಗ ದೆಹಲಿಯಲ್ಲಿ ರೂ.1,907 ಆಗಲಿದೆ ಹೊಸ ವರ್ಷದ ಮೊದಲ ದಿನದಂದು, OMC ಗಳು 19 ಕೆಜಿ ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು 102.50 ರೂ. ಕಡಿತಗೊಳಿಸಿದ್ದವು.

Key words: Decrease – price –commercial- LPG -cylinder.