ಇಂದಿನ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯಗಳೇನು ಗೊತ್ತೆ…?

ಬೆಂಗಳೂರು,ಜೂನ್,21,2021(www.justkannada.in): ಬಿಎಸ್ ಸಿ ಅಗ್ರಿ ಮತ್ತು ಸರಿಸಮಾನ ಕೋರ್ಸ್ ಗಳಲ್ಲಿ ರೈತರ ಮಕ್ಕಳಿಗೆ ಮೀಸಲಾತಿ 40%ರಿಂದ  ಶೇ.50ಕ್ಕೆ ಹೆಚ್ಚಳ ಮಾಡಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಯಿತು.jk

ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ  ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಸಭೆ ಬಳಿಕ ಮಾತನಾಡಿ ಮಾಹಿತಿ ನೀಡಿದ ಸಚಿವ ಬಸವರಾಜ ಬೊಮ್ಮಾಯಿ,  ಬಿಎಸ್ ಸಿ ಅಗ್ರಿ  ಸರಿಸಮಾನ ಕೋರ್ಸ್ ಗಳಲ್ಲಿ ರೈತರ ಮಕ್ಕಳಿಗೆ ಮೀಸಲಾತಿ 40%ರಿಂದ  ಶೇ.50ಕ್ಕೆ ಹೆಚ್ಚಳ, ಬೆಳಗಾವಿಯ ರಾಣಿ ಚೆನ್ನವಿವಿಯಲ್ಲಿ ಆಡಳಿತಸೌಧ ಇತರೆ ನಿರ್ಮಾಣ ಕಾಮಗಾರಿಗೆ 110 ಕೋಟಿ ನೀಡಲು ಅನುಮೋದನೆ ನೀಡಲಾಗಿದೆ ಎಂದರು.

ಇನ್ನು ಸಾದಿಲ್ವಾರು ನಿಧಿ 2500 ಕೋಟಿಗೆ ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದ್ದು, ಮೈಸೂರು ಮೆಡಿಕಲ್ ಕಾಲೇಜಿಗೆ 154 ಕೋಟಿ ರೂ  ಪರಿಷ್ಕೃತ ಯೋಜನೆಗೆ ಅನುಮೋದನೆ ನೀಡಲಾಗಿದೆ. 100 ಪೊಲೀಸ್ ಠಾಣೆಗಳ ನಿರ್ಮಾಣಕ್ಕೆ ನಿರ್ಧರಿಸಲಾಗಿದ್ದು,  100 ಪೊಲೀಸ್ ಠಾಣೆ ನಿರ್ಮಾಣಕ್ಕೆ 200 ಕೋಟಿ ರೂ ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ. ಹಾಗೆಯೇ ಹಾಸನ ಏರ್ ಪೋರ್ಟ್ ನಿರ್ಮಾಣಕ್ಕೆ 193.65 ಕೋಟಿ ರೂ ನೀಡಲು ಅನುಮೋದನೆ ನೀಡಲಾಗಿದೆ ಎಂದು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಹಾಗೆಯೇ ರಾಜ್ಯದ ಜಲಾಶಯಗಳ ಅಭಿವೃದ್ಧಿಗೆ ಅಸ್ತು. 1500 ಕೋಟಿ ರೂ ಅನುಮೋದನೆ ವಿಶ್ವಬ್ಯಾಂಕ್ ನೆರವಿನೊಂದಿಗೆ ಅಭಿವೃದ್ದಿ ಎಂದು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

Key words: decisions- taken -Cabinet meeting-minister –basavaraja bommai