ಮಾಧ್ಯಮದವರಿಗೂ ಬೂಸ್ಟರ್ ಡೋಸ್ ನೀಡಲು ನಿರ್ಧಾರ- ಸಚಿವ ಡಾ.ಕೆ.ಸುಧಾಕರ್.

Promotion

ಬೆಂಗಳೂರು,ಜನವರಿ,13,2022(www.justkannada.in):  ರಾಜ್ಯದಲ್ಲಿ ಕೋವಿಡ್ 3ನೇ ಅಲೆ ಸಾಕಷ್ಟು ಆತಂಕವನ್ನುಂಟು ಮಾಡಿದ್ದು, ದಿನೇ ದಿನೇ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಮೊದಲಿ ಕೊರೋನಾ ಫ್ರಂಟ್ ಲೈನ್ ವಾರಿಯರ್ಸ್ ಗೆ ಸರ್ಕಾರ ಬೂಸ್ಟರ್ ಡೋಸ್ ನೀಡುತ್ತಿದೆ.

ಈ ನಡುವೆ ಮಾದ್ಯಮದವರಿಗೂ ಬೂಸ್ಟರ್ ಡೋಸ್ ನೀಡಲು ನಿರ್ಧಾರ ಮಾಡಲಾಗಿದೆ ಎಂಧು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು,  ಮಾಧ್ಯಮದವರು ನಮ್ಮೊಟ್ಟಿಗೆ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ.  ಕೊವೀಡ್ ಫ್ರಂಟ್ ಲೈನ್ ವಾರಿಯರ್ಸ್ ಎಂಬ ಕಾರಣಕ್ಕೆ ಮಾಧ್ಯಮದವರಿಗೂ ಬೂಸ್ಟರ್ ಡೋಸ್ ನೀಡುತ್ತೇವೆ.  ಮೊದಲ ಹಂತದಲ್ಲೇ ಬೂಸ್ಟರ್ ಡೋಸ್  ಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.

Key words: Decision – give- booster dose – media-Minister- Dr. K. Sudhakar.