ರಾಜ್ಯದ ಹಿರಿಯ ಆನೆ ಗೀತಾ ನಿಧನ

Promotion

ಶಿವಮೊಗ್ಗ,ಡಿಸೆಂಬರ್,13,2020(www.justkannada.in) : ರಾಜ್ಯದ ಹಿರಿಯ ಆನೆ ಎಂದೇ ಹೆಸರಾಗಿದ್ದ ಸಕ್ರೆಬೈಲು ಆನೆಬಿಡಾರದ ಹಿರಿಯ ಆನೆ ಗೀತಾ (85) ಸಾವನ್ನಪ್ಪಿದೆ.

logo-justkannada-mysore

ಇಡೀ ರಾಜ್ಯದ ಅತ್ಯಂತ ಹಿರಿಯ ಆನೆ ಎನಿಸಿಕೊಂಡಿದ್ದ ಇದು ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.

ಸಕ್ರೆಬೈಲಿನ ಕ್ರಾಲ್ ಸಮೀಪ ಆನೆ ಗೀತಾ ಸಾವನ್ನಪ್ಪಿದ್ದು, ಕಳೆದ ಮೂರ್ನಾಲ್ಕು ದಿನಗಳಿಂದ ಆಹಾರ ತ್ಯಜಿಸಿದ್ದ ಆನೆ ಇಂದು ಬೆಳಗ್ಗೆ ಮೃತಪಟ್ಟಿದೆ.

ರಾಜ್ಯದ ಆನೆ ಬಿಡಾರಗಳಲ್ಲೇ ಅತಿ ಹಿರಿಯ ಆನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಆನೆ ಗೀತಾ 1968ರಲ್ಲಿ ಕಾಕನಕೋಟೆಯಲ್ಲಿ ಸೆರೆಹಿಡಿದು ಸಕ್ರೆಬೈಲ್ಗೆ ಕರೆತಂದು ಪಳಗಿಸಲಾಗಿತ್ತು. ಎಲ್ಲರ ಅಚ್ಚುಮೆಚ್ಚಿನ ಆನೆಯಾಗಿದ್ದು, ಗೀತಾ ನಿಧನಕ್ಕೆ ಮಾವುತರು ಕಂಬನಿ ಮಿಡಿದಿದ್ದಾರೆ.

Death-elder-elephant-Geeta-state

key words : Death-elder-elephant-Geeta-state