“ನೀರಿನ ಸಂಪಿಗೆ ಬಿದ್ದ ಮಗು ಸಾವು”

Promotion

ಮೈಸೂರು,ಜನವರಿ,20,2021(www.justkannada.in) : ನಿರ್ಮಾಣ ಹಂತದಲ್ಲಿದ್ದ ಮನೆಯ ಮುಂದಿದ್ದ ನೀರಿನ ಸಂಪಿಗೆ ಬಿದ್ದು ಮಗು(ದಯಾನಂದ್) ಸಾವನ್ನಪ್ಪಿದೆ.jkಹುಣಸೂರು ತಾಲೂಕಿನ ತೆಂಕಲಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ತೆಂಕಲಕೊಪ್ಪಲಿನ ನಟರಾಜ್ ಎಂಬುವವರ ಪುತ್ರ ಒಂದೂವರೆ ವರ್ಷದ ದಯಾನಂದ್ ನಿರ್ಮಾಣದ ಹಂತದಲ್ಲಿದ್ದ ಮನೆ ಎದುರು ಅಕ್ಕನ ಜೊತೆ ಆಟವಾಡುತ್ತಿರುವ ವೇಳೆ ಅಕ್ಕಮನೆಯೊಳಗೆ ಹೋಗಿ ಬರುವಷ್ಟರಲ್ಲಿ ದಯಾನಂದ್ ಕಾಣೆಯಾಗಿದ್ದಾನೆ.Death-child(Dayanand)-water

ಬಳಿಕ ಆತನಿಗಾಗಿ ಮನೆಯವರೆಲ್ಲ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಎದುರಿಗಿದ್ದ ನೀರಿನ ಸಂಪಿನೊಳಗೆ ಬಿದ್ದ ಮಗುವಿನ ಮೃತ ದೇಹ ಪತ್ತೆಯಾಗಿದೆ. ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

key words : Death-child(Dayanand)-water