ದಕ್ಷಿಣ ಪದವೀಧರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ನವೆಂಬರ್ 6 ರಂದು ಕೊನೆಯ ದಿನ.

Promotion

ಮೈಸೂರು, ಅಕ್ಟೋಬರ್, 15,2021(www.justkannada.in):  ದಕ್ಷಿಣ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ 2021ರ ನವೆಂಬರ್ 6 ರಂದು ಕೊನೆಯ ದಿನವಾಗಿದೆ ಎಂದು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಕರ್ನಾಟಕ ದಕ್ಷಿಣ ಪದವೀಧರರ ಕ್ಷೇತ್ರದ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ವಿಧಾನ ಪರಿಷತ್ತಿನ ಕರ್ನಾಟಕ ದಕ್ಷಿಣ ಪದವೀಧರರ ಕ್ಷೇತ್ರದ ಮತ ಕ್ಷೇತ್ರಗಳ ಮತದಾರರ ಪಟ್ಟಿ ತಯಾರಿಕೆಯಾಗುತ್ತಿದ್ದು, ಮತದಾರರ ನೋಂದಣಿ ನಿಯಮ 1960ರ ಅನುಸಾರ ಅಕ್ಟೋಬರ್ 1 ರಂದು ಪ್ರಕಟಿಸಲಾದ ಸೂಚನೆಯಲ್ಲಿ ಸಂಬಂಧಿಸಿದ ಪದವಿಧರರ ಮತಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಲು ಅರ್ಹರಿರುವ ಪ್ರತಿಯೊಬ್ಬ ವ್ಯಕ್ತಿಯು ಮತದಾರರ ನೋಂದಣಿ ಮಾಡಿಕೊಳ್ಳಬಹುದು.By-election –belagavi-maski-basvakalyana- three constituencies-voting

ಮತದಾರರ ನೋಂದಣಿ ನಿಯಮಗಳು 1960ಕ್ಕೆ ಲಗತ್ತಿಸಿರುವ ಮತ್ತು ಅಕ್ಟೋಬರ್ 2 ರಂದು ದಿನಪತ್ರಿಕೆಗಳಲ್ಲಿ ಪ್ರಕಟಿಸಲಾದ ಎರಡನೇ ಅನುಸೂಚಿಯಲ್ಲಿ ಪುನರುದ್ಧರಿಸಿದ್ದೂ, ನಮೂನೆ 18ರಲ್ಲಿ ಅರ್ಜಿಯಲ್ಲಿ ಇದುವರೆಗೂ ತಮ್ಮ ಹೆಸರನ್ನು ಸೇರಿಸದೇ ಇರುವ ಎಲ್ಲಾ ವ್ಯಕ್ತಿಗಳು 2021ರ ನವೆಂಬರ್ 6ರೊಳಗೆ ಸಂಬಂಧಪಟ್ಟ ಮತದಾರರ ನೋಂದಾಣಿಧಿಕಾರಿಗಳ ಕಚೇರಿಗೆ ಕಳುಹಿಸಬೇಕು.

ಹೆಚ್ಚಿನ ವಿವರಗಳಿಗೆ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ವೆಬ್‍ಸೈಟ್ www.ceokarnataka.kar.nic.in ಅನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

Key words:  deadline – November 6 – list -Southern Graduate- constituency- voters.