ಡಿ.ಸಿ.ಟಿ.ಇ-ಇನ್ಫೊಸಿಸ್ ಒಡಂಬಡಿಕೆಗೆ ಅಂಕಿತ: ಪ್ರತಿವರ್ಷ 5 ಲಕ್ಷ ವಿದ್ಯಾರ್ಥಿಗಳು,ಬೋಧಕರಿಗೆ ಪ್ರಯೋಜನ-ಸಚಿವ ಡಾ.ಸಿ.ಎನ್.ಅಶ್ವತ್ ನಾರಾಯಣ್

Promotion

ಬೆಂಗಳೂರು,ಅಕ್ಟೋಬರ್,27,2021(www.justkannada.in):  ಪ್ರತಿವರ್ಷ 5 ಲಕ್ಷ ವಿದ್ಯಾರ್ಥಿಗಳು ಹಾಗೂ ಬೋಧಕರಿಗೆ ಉಪಯುಕ್ತವಾಗುವುದರೊಂದಿಗೆ ವಿದ್ಯಾರ್ಥಿಗಳ ಕಲಿಕಾ ರೀತಿಯಲ್ಲಿ ಮಹತ್ವದ ಪರಿವರ್ತನೆ ಉಂಟುಮಾಡುವ ಒಡಂಬಡಿಕೆಗೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯು (ಡಿ.ಸಿ.ಟಿ.ಇ.) ಮುಂಚೂಣಿ ಐಟಿ ಕಂಪನಿ ಇನ್ಫೋಸಿಸ್  ಜತೆ ಬುಧವಾರ ಸಹಿ ಹಾಕಿತು.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ ನಾರಾಯಣ್ ಅವರ ಸಮ್ಮುಖದಲ್ಲಿ ಡಿ.ಸಿ.ಟಿ.ಇ. ಯ ‘ಹೆಲ್ಪ್ ಎಜುಕೇಟ್’ ಉಪಕ್ರಮದಡಿಯ ಈ ಒಡಂಬಡಿಕೆಯನ್ನು ವಿಧಾನಸೌಧದಲ್ಲಿ ವಿನಿಮಯ ಮಾಡಿಕೊಳ್ಳಲಾಯಿತು. ಸರ್ಕಾರದ ಪರವಾಗಿ ಡಿಸಿಟಿಇ ಆಯುಕ್ತ ಪಿ.ಪ್ರದೀಪ್ ಮತ್ತು ಇನ್ಫೋಸಿಸ್ ಹಿರಿಯ ಉಪಾಧ್ಯಕ್ಷ (ಶಿಕ್ಷಣ ಮತ್ತು ತರಬೇತಿ) ತಿರುಮಲ ಆರೋಹಿ ಅವರು ಒಪ್ಪಂದ ಪತ್ರಗಳಿಗೆ ಸಹಿ ಹಾಕಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ಅಶ್ವತ್ ನಾರಾಯಣ್, “ಈ ಒಪ್ಪಂದವು ಮೂರು ಭಾಗಗಳನ್ನು ಒಳಗೊಂಡಿದೆ. ಮೊದಲಿಗೆ, ಇನ್ಫೋಸಿಸ್ ಕಂಪನಿಯು ರೂ 35 ಕೋಟಿ ವೆಚ್ಚದಲ್ಲಿ ರೂಪಿಸಿರುವ ಇನ್ಫೋಸಿಸ್ ಸ್ಪ್ರಿಂಗ್ ಬೋರ್ಡ್ ಡಿಜಿಟಲ್ ವೇದಿಕೆಯಲ್ಲಿರುವ 3900ಕ್ಕೂ ಹೆಚ್ಚಿನ ಕೋರ್ಸ್ ಗಳು ಮತ್ತು 1.6 ಲಕ್ಷ ಕಲಿಕಾ ಸಂಪನ್ಮೂಲಗಳನ್ನು 5 ಲಕ್ಷ ವಿದ್ಯಾರ್ಥಿಗಳು ಹಾಗೂ ಬೋಧಕರಿಗೆ ಉಚಿತವಾಗಿ ಲಭ್ಯವಾಗಿಸಲಿದೆ. ಎರಡನೆಯದಾಗಿ, ಕಂಪನಿಯು ಬೋಧಕರ ತರಬೇತಿಯಲ್ಲಿ ಸಹಕರಿಸಲಿದೆ. ಮೂರನೇಯದಾಗಿ, ಕಂಪನಿಯು 15,000 ಕಂಪ್ಯೂಟರುಗಳನ್ನು ದೇಣಿಗೆ ಕೊಡುವ ಮೂಲಕ ಕಾಲೇಜುಗಳ ಡಿಜಿಟಲ್ ಮೂಲಸೌಕರ್ಯವನ್ನು ಸದೃಢಗೊಳಿಸಲಿದೆ” ಎಂದು ವಿವರಿಸಿದರು.

ಈ ಒಪ್ಪಂದವು ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಆಶಯದಂತೆ ಸಂಯೋಜಿತ ಕಲಿಕೆಗೆ (ಬ್ಲೆಂಡೆಂಡ್ ಲರ್ನಿಂಗ್) ಮತ್ತು ಉದ್ಯಮದ ಅಗತ್ಯಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಪೂರಕವಾಗಿದೆ ಎಂದು ಸಚಿವ ಅಶ್ವಥ್ ನಾರಾಯಣ್ ಅಭಿಪ್ರಾಯಪಟ್ಟರು.

“ಇನ್ಫೋಸಿಸ್ ಸ್ಪ್ರಿಂಗ್ ಬೋರ್ಡ್ ವೇದಿಕೆಯು ವರ್ಚುಯಲ್ ಪ್ರಯೋಗಾಲಯಗಳು, ಗೇಮಿಫಿಕೇಷನ್ ಮತ್ತಿತರ ಅಂಶಗಳನ್ನು ಒಳಗೊಂಡು ಆಸಕ್ತಿದಾಯಕವಾಗಿದೆ. ಇದು ಉದ್ಯಮ ಪರಿಣತರೊಂದಿಗೆ ಸಂಪರ್ಕ ಕಲ್ಪಿಸಲು ಅನುವು ಮಾಡಿಕೊಡುತ್ತದೆ. ಜೊತೆಗೆ ಉದ್ಯಮಕ್ಕೆ ಬೇಕಾದ ಕೌಶಲಗಳು ಹಾಗೂ ವಿದ್ಯಾರ್ಥಿಗಳು ಕೋರ್ಸ್ ಗಳಲ್ಲಿ ಕಲಿಯುವ ಕೌಶಲಗಳ ನಡುವಿನ ಕಂದಕವನ್ನು ನಿವಾರಿಸಲು ಅನುವು ಮಾಡಿಕೊಡುತ್ತದೆ. ಇದರಲ್ಲಿರುವ 1.6 ಲಕ್ಷ ಕಲಿಕಾ ಸಂಪನ್ಮೂಲಗಳು ಆಡಿಯೊ, ವಿಡಿಯೊ, ಆನಿಮೇಷನ್ ಇತ್ಯಾದಿಗಳ ಮೂಲಕ ವಿದ್ಯಾರ್ಥಿಗಳ ಅರ್ಥಪೂರ್ಣ ಕಲಿಕೆಗೆ ಸಹಕಾರಿಯಾಗಿವೆ” ಎಂದು ಹೇಳಿದರು.

ಒಪ್ಪಂದದ ಪ್ರಕಾರ ಬೋಧಕರ ನಿಯಮಿತ ತರಬೇತಿಯಲ್ಲಿ ಇನ್ಫೋಸಿಸ್ ಭಾಗಿಯಾಗಲಿದ್ದು, ಈಗ ಮೊದಲನೇ ತಂಡದ 200 ಬೋಧಕರಿಗೆ ಮೈಸೂರು ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ಸದ್ಯದಲ್ಲೇ ತರಬೇತಿ ಆರಂಭವಾಗುತ್ತದೆ ಎಂದು ಅಶ್ವತ್  ನಾರಾಯಣ್ ತಿಳಿಸಿದರು.

ಸರ್ಕಾರಿ ತಾಂತ್ರಿಕ ಕಾಲೇಜುಗಳಿಗೆ ಒಟ್ಟು 30,000 ಕಂಪ್ಯೂಟರುಗಳ ಅಗತ್ಯವಿತ್ತು. ಈಗ ಇನ್ಫೊಸಿಸ್ 15,000 ಕಂಪ್ಯೂಟರುಗಳನ್ನು ನೀಡುವ ಮೂಲಕ 27,000 ಕಂಪ್ಯೂಟರುಗಳು ಲಭ್ಯವಾದಂತೆ ಆಗಿವೆ. ಇದರಿಂದಾಗಿ ಸರ್ಕಾರಿ ಡಿಪ್ಲೊಮಾ, ಪಾಲಿಟೆಕ್ನಿಕ್ ಹಾಗೂ ಎಂಜಿನಿಯರಿಂಗ್ ಕಾಲೇಜುಗಳ ಶೇ 90ರಷ್ಟು ಕಂಪ್ಯೂಟರ್ ಅಗತ್ಯ ಪೂರೈಕೆಯಾದಂತೆ ಆಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಈಗ ಸ್ಪ್ರಿಂಗ್ ಬೋರ್ಡ್ ಡಿಜಿಟಲ್ ವೇದಿಕೆಗಾಗಿ 35 ಕೋಟಿ ರೂಪಾಯಿ ವೆಚ್ಚ ಮಾಡಿರುವ ಇನ್ಫೊಸಿಸ್, ಮುಂದಿನ 5ರಿಂದ 10 ವರ್ಷಗಳ ಅವಧಿಯಲ್ಲಿ ಇನ್ನೂ 750 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುವ ಯೋಜನೆ ಹೊಂದಿದೆ ಎಂದೂ ಹೇಳಿದರು.

ಈ ಒಡಂಬಡಿಕೆ ಏರ್ಪಟ್ಟಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಇನ್ಫೊಸಿಸ್ ಸ್ಪ್ರಿಂಗ್ ಬೋರ್ಡ್ ಪ್ರೋಗ್ರಾಮ್ ಮ್ಯಾನೇಜರ್ ಕಿರಣ್ ಎನ್.ಜಿ. ಅವರು, ಉನ್ನತ ಶಿಕ್ಷಣದ ಗುಣಮಟ್ಟವನ್ನು ಮೇಲ್ದರ್ಜೆಗೇರಿಸಲು ಇದು ಉತ್ತೇಜನ ನೀಡುತ್ತದೆ ಎಂದರು. ಜೊತೆಗೆ, ಯುವ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸಲು ರಾಷ್ಟ್ರೀಯ ಶಿಕ್ಷಣ ನೀತಿಯು ಸಕಾರಾತ್ಮಕ ಹೆಜ್ಜೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಇನ್ಫೊಸಿಸ್ ಕಂಪನಿಯು ತನ್ನ ಸಿಬ್ಬಂದಿಯ ಸಾಮರ್ಥ್ಯ ವೃದ್ಧಿ, ಜಾಗತಿಕ ಗುಣಮಟ್ಟದ ನಿರಂತರ ಕಲಿಕೆ ಹಾಗೂ ಪ್ರತಿಭಾ ವೃದ್ಧಿಗೆ ಮೊದಲಿನಿಂದಲೂ ಒತ್ತು ಕೊಡುತ್ತಾ ಬಂದಿದೆ. ಈಗ ಒಡಂಬಡಿಕೆಯ ಮೂಲಕ ಅದನ್ನು ವಿದ್ಯಾರ್ಥಿಗಳಿಗೂ ವಿಸ್ತರಿಸಲು ಅವಕಾಶವಾಗಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯಾಚರಣಾ ಅಧಿಕಾರಿ (ಸಿಒಒ) ಪ್ರವೀಣ್ ರಾವ್ ವಿವರಿಸಿದರು.

ಈ ಒಡಂಬಡಿಕೆಯ ಅನುಷ್ಠಾನದಲ್ಲಿ ಕೈಜೋಡಿಸಿರುವ ರೋಟರಿ ಸಂಸ್ಥೆಯು, ಕಂಪ್ಯೂಟರುಗಳನ್ನು ಕಾಲೇಜುಗಳಿಗೆ ತಲುಪಿಸಿ ಅವನ್ನು ಅಳವಡಿಸುವ ಕಾರ್ಯವನ್ನು ಮಾಡಲಿದೆ. ಜೊತೆಗೆ, ಕಂಪ್ಯೂಟರುಗಳಿಗೆ ಆಪರೇಟಿಂಗ್ ಸಿಸ್ಟಮ್ (ಕಾರ್ಯಾಚರಣೆ ವ್ಯವಸ್ಥೆ) ಹಾಗೂ ಅಗತ್ಯ ಸಾಫ್ಟ್ ವೇರ್ ಗಳನ್ನು ಒದಗಿಸಿಕೊಡಲಿದೆ.

ಇದೇ ವೇಳೆ, ದೇಣಿಗೆ ಕೊಡಲಾದ 300 ಕಂಪ್ಯೂಟರ್ ಗಳನ್ನು ನಗರದ ಕೆ.ಆರ್.ಸರ್ಕಲ್ ನಲ್ಲಿರುವ ಎಸ್.ಜೆ.ಪಾಲಿಟೆಕ್ನಿಕ್ ಗೆ ಕೊಂಡೊಯ್ಯಲು ಸಿದ್ಧವಾಗಿದ್ದ ವಾಹನಕ್ಕೆ ಸಚಿವ ಅಶ್ವಥ್ ನಾರಾಯಣ್ ಹಸಿರು ನಿಶಾನೆ ತೋರಿದರು.

ರೋಟರಿ ಇಂಡಿಯಾ ಲಿಟರರಿ ಮಿಷನ್ ನ ರಾಜೇಂದ್ರ ರಾಯ್, ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ್ ನಾಯ್ಕ್, ಡಿಸಿಟಿಇ ಆಯುಕ್ತ ಪ್ರದೀಪ್ ಪಿ ಅವರು ಮಾತನಾಡಿದರು. ಡಿಸಿಟಿಯ ನಿರ್ದೇಶಕ ಮಂಜುನಾಥ್ ಆರ್. ಮತ್ತು ಜಂಟಿ ನಿರ್ದೇಶಕ ಶಿವಶಂಕರ್ ನಾಯ್ಕ್ ಎಲ್. ಮತ್ತಿತರರು ಪಾಲ್ಗೊಂಡಿದ್ದರು.

Key words: DCTE – Infosys -transform – learning – benefit -5 lakh- students –faculty- Minister -Dr.C.N.Ashwatha Narayana

ENGLISH SUMMARY…

Will benefit 5 lakh students and faculty: Minister Dr.C.N.Ashwatha Narayana

DCTE inks MoU with Infosys to transform the way of learning & Shape careers

Bengaluru: The Department of Collegiate & Technical Education (DCTE) under its’ ‘Help Educate’ initiative entered into an MoU with IT pioneer Infosys aimed at transforming the way students of higher education learn and shape their careers. It is expected to benefit 5 lakh students and faculty every year.

The MoU was signed on Wednesday at Vidhana Soudha in presence of Dr.C.N.Ashwatha Narayana, the Minister for Higher Education. Presiding over the event he told, The MoU will benefit about 5 lakh students and faculty belonging to higher education. The Minister added, this facilitates blended learning and industry readiness of learners as per the aspirations of NEP-2020.

“The MoU includes three components of providing access to Infosys Springboard which has  4900+ courses and 1.6 Lakh learning resources, providing faculty development program and supporting the government in setting up digital infrastructure by donating 15,000 debonded computers”, he explained.

“Infosys Springboard is a digital platform developed at a cost of Rs 35 Cr by the IT major which enables to acquire multiple digital skills along with life skills. The platform comprising of virtual labs, gamification, and other interesting features also provides access to industry experts and enables to fill the gap between industry requirements and skillsets of students. About 1.6 learning resources incorporated in this includes audios, videos, animations, etc” Narayana stated.

As per this MoU, Infosys will also join hands with the DTCE to train the faculty on a regular basis, and to begin with training of 200 teachers will be conducted at the Mysuru Infosis campus soon, he informed.

The donation of 15,000 De-bonded computers by Infosys will almost end the shortage of computers in Government  Diploma, Polytechnic and Engineering colleges of the state. Out of the required 30,000 computers now 27,000 computers worth Rs 135 Cr have been donated by companies under DTCE’s “Help Educate” initiative, Narayana told.

Infosys which has developed Infosys Springboard at a cost of Rs 35 Cr has plans of further investing Rs 750 Cr to update the contents in the next 5-10 years, he stated.
Praveen Rao, Chief Operating Officer, Infosys said, “Infosys always facilitated capacity building, continuous access to world-class learning and Talent building for its’ employees and now this has been extended to students and faculty as well”.

Kiran N.G., Program Manager Springboard, Infosys, expressing happiness about MoU, said, it will be a boost to upgrade the higher education. He added, that NEP is a first step in the right direction to empower the youth learners.

Rotary Institute has extended its support in this endeavor by taking the responsibility of transporting the computers to designated colleges and getting done the installation. Besides, it will also provide the Operating System and required software for the computers.

The vehicle carrying 300 De-bonded computers to S.J.Polytechnic (K.R.Circle, Bengaluru) was also flagged off by Minister Narayana at the Entrance of Vidhana Soudha.

Rtn. Rajender Rai, Member, National Executive Rotary India Literacy Mission, Kumar Naik, ACS, Dept. of Higher Education, Pradeep P., Commissioner were present and spoke on the occasion.

DCTE Commissioner P.Pradeep and Infosys Sr vice President thirumala Arohi exchanged the MOU papers.

Manjunatha R., Director, Shivashankar Naik L., Joint Director, DCTE attended.