ಸಮ್ಮಿಶ್ರ ಸರ್ಕಾರದ ಬಗ್ಗೆ ಭವಿಷ್ಯ ನುಡಿದ ಡಿಸಿಎಂ ಲಕ್ಷ್ಮಣ್ ಸವದಿ…

Promotion

ಬೆಳಗಾವಿ,ಡಿ,5,2019(www.justkannada.in0:  ಇನ್ನು 10 ವರ್ಷಗಳ ಕಾಲ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲ್ಲ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಭವಿಷ್ಯ ನುಡಿದಿದ್ದಾರೆ.

ಇಂದು 15 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆ ಅಥಣಿ ಕ್ಷೇತ್ರ ನಾಗನೂರಿನಲ್ಲಿ ಮತದಾನ ಮಾಡಿದ ಬಳಿಕ ಮಾತನಾಡಿದ ಡಿಸಿಎಂ ಲಕ್ಷ್ಮಣ್ ಸವದಿ, ಅಥಣಿ ಮತ್ತು ಕಾಗವಾಡದಲ್ಲಿ ಬಿಜೆಪಿ ಪಕ್ಕ ಗೆಲ್ಲುತ್ತದೆ. ಶ್ರೀಮಂತ್ ಪಾಟೀಲ್ ಮತ್ತು ಮಹೇಶ್ ಕುಮುಟಳ್ಳಿ ಗೆಲುವು ಸಾಧಿಸಲಿದ್ದಾರೆ. ಇಬ್ಬರನ್ನ ವಿಧಾನಸೌಧಕ್ಕೆ ನಾನೇ ಕರೆತರುತ್ತೇನೆ. ಹೀಗೆ ಸಿಎಂ ಬಿಎಸ್ ವೈಗೆ ಮಾತು ಕೊಟ್ಟಿದ್ದೇನೆ. ಕರೆದುಕೊಂಡು ಹೋಗ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

15 ಕ್ಷೇತ್ರಗಳ ಪೈಕಿ ಬಿಜೆಪಿ 13 ಕ್ಷೇತ್ರಗಳಲ್ಲಿ ಗೆಲ್ಲುತ್ತದೆ. ಇನ್ನು 10 ವರ್ಷಗಳ ಕಾಲ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲ್ಲ. ಸಮ್ಮಿಶ್ರ ಸರ್ಕಾರದ ನಿರೀಕ್ಷೆಗೆ ನಿರಾಸೆಯಾಗಲಿದೆ. ಹೆಚ್.ಡಿ ಕುಮಾರಸ್ವಾಮಿ, ಖರ್ಗೆ , ಸಿದ್ಧರಾಮಯ್ಯಗೆ ನಿರಾಸೆಯಾಗಲಿದೆ ಎಂದು ಲಕ್ಷ್ಮಣ್ ಸವದಿ ನುಡಿದರು.

Key words: DCM -Lakshman Sawadi -predicted -coalition government.