ಎಸ್‌ ಟಿಪಿ ಮತ್ತು ಟಿಎಸ್ ಪಿ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಅಧಿಕಾರಿಗಳ ಜತೆ ಸಭೆ ನಡೆಸಿ ಕೆಲ ಸೂಚನೆಗಳನ್ನ ನೀಡಿದ ಡಿಸಿಎಂ ಗೋವಿಂದ ಕಾರಜೋಳ…

ಬೆಂಗಳೂರು,ಸೆ,13,2019(www.justkannada.in): ರಾಜ್ಯದಲ್ಲಿ  ನೆರೆ ಹಾಗೂ  ಪ್ರವಾಹದಿಂದ 32ಸಾವಿರ ಕೋಟಿ ರೂ ನಷ್ಟವಾಗಿದೆ. ಸಾರ್ವಜನಿಕ ಆಸ್ತಿ, ರಸ್ತೆ, ಸೇತುವೆ, ರೈತರ ಬೆಳೆ ಹಾನಿ, ತಗ್ಗು ಪ್ರದೇಶದಲ್ಲಿ ಬಡವರು, ಪರಿಶಿಷ್ಟ ಜಾತಿ ಮತ್ತು ಪಂಗಡದವರು ಮನೆ ಕಳೆದುಕೊಂಡಿದ್ದಾರೆ. ಸುಮಾರು 2.35 ಲಕ್ಷ ಮನೆಗಳು ಹಾನಿಗೊಳಗಾಗಿವೆ.  ಸಂತ್ರಸ್ತರಿಗೆ ಆದ್ಯತೆಯ ಮೇರೆಗೆ ಪುನರ್ವಸತಿ ಕಲ್ಪಿಸಬೇಕಾಗಿದೆ. ಪ್ರವಾಹ ಪೀಡಿತ ಪ್ರದೇಶಳಲ್ಲಿ‌ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಹಾಗೂ  ಪುನರ್ವಸತಿ ಕಾಮಗಾರಿಯನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಡಿಸಿಎಂ ಗೋವಿಂದ ಕಾರಜೋಳ ಸೂಚನೆ ನೀಡಿದರು.

ಎಸ್‌ ಟಿಪಿ ಮತ್ತು ಟಿಎಸ್ ಪಿ ಕಾರ್ಯಕ್ರಮಗಳ ಅನುಷ್ಠಾನ ಕುರಿತು ನೋಡೆಲ್ ಅಧಿಕಾರಿಗಳೊಂದಿಗೆ ಉಪಮುಖ್ಯಮಂತ್ರಿ  ಗೋವಿಂದ ಎಂ ಕಾರಜೋಳ ಅವರು ಸಭೆ ನಡೆಸಿದರು.  ಸಂತ್ರಸ್ತರಿಗೆ ಆದ್ಯತೆಯ ಮೇರೆಗೆ  ಕಾಮಗಾರಿಗಳನ್ನು ಕೈಗೊಳ್ಳಬೇಕಾಗಿರುವುದರಿಂದ ಎಲ್ಲಾ ಇಲಾಖೆಗಳು ಎಸ್ ಟಿಪಿ ಮತ್ತು ಟಿಎಸ್ ಪಿ ಕಾರ್ಯಕ್ರಮಗಳ  ಕ್ರಿಯಾಯೋಜನೆಯನ್ನು ಮಾರ್ಪಡಿಸಿಕೊಂಡು ಅನುಷ್ಟಾನಗೊಳಿಸಬೇಕು. ನಗರಾಭಿವೃದ್ಧಿ ಇಲಾಖೆಯು ಎಸ್ ಸಿಪಿ ಮತ್ತು ಟಿಎಸ್ ಪಿ ಯೋಜನೆಯ ಅನುದಾನದಲ್ಲಿ  ನೆರೆ ಪೀಡಿತ ಪ್ರದೇಶಗಳಲ್ಲಿ ಶೇ. 50 ರಷ್ಟು ಅನುದಾನವನ್ನು ಮನೆ ನಿರ್ಮಾಣ ಹಾಗೂ ಉಳಿದ ಅನುದಾನವನ್ನು ಮೂಲಮೂತ ಸೌಕರ್ಯ ಅಭಿವೃದ್ಧಿ ಗೆ ಬಳಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಿದರು.

ಹಾಗೆಯೇ ಎಲಿವೇಟಡ್ ಕಾರಿಡಾರ್ ಮತ್ತು ಫೆರಿಪೆರಿಯಲ್ ರಿಂಗ್ ರಸ್ತೆ  ಯೋಜನೆಡಯಡಿ ಎಸ್ ಟಿಪಿ ಟಿಎಸ್ ಪಿ ಯೋಜನೆಯ ಅನುದಾನವನ್ನು ನೆರೆ ಪೀಡಿತ ಪ್ರದೇಶಗಳಲ್ಲಿರುವ ಪರಿಶಿಷ್ಟರ ಪುನರ್ವಸತಿ ಗೆ ಬಳಕೆ ಮಾಡಬೇಕು.  ಸಹಕಾರ ಇಲಾಖೆಯು ಪರಿಶಿಷ್ಟರನ್ನು  ಪಿಕೆಪಿಎಸ್ ಸಂಘಗಳ ಸದಸ್ಯರನ್ನಾಗಿಸಬೇಕು. ಕಂದಾಯ ಇಲಾಖೆಯಿಂದ ದಾಖಲಾತಿ ಪಡೆದು ಎಲ್ಲರಿಗೂ ಸದಸ್ಯರನ್ನಾಗಿಸಿ.  ಹಮಾಲಿಗಳಿಗೆ ಮನೆ ನಿರ್ಮಾಣ ಮಾಡಬೇಕು. ಸಂತ್ರಸ್ತರಿಗೆ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳೂ ಎಸ್ ಟಿ ಪಿ ಮತ್ತು ಟಿಎಸ್ ಪಿ ಕಾರ್ಯ ಕ್ರಮಗಳ  ಕ್ರಿಯಾಯೋಜನೆ ಮಾರ್ಪಡಿಸಿ ಆದ್ಯತೆಯ ಮೇರೆಗೆ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದರು.

16 ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ‌ ನಡೆಯಲಿರುವ ಪರಿಷತ್ ಸಭೆಗೆ ಕ್ರಿಯಾ ಯೋಜನೆಯೊಂದಿಗೆ ಹಾಜರಾಗಬೇಕು ಎಂದು ಡಿಸಿಎಂ ಗೋವಿಂದ ಕಾರಜೋಳ ಸೂಚಿಸಿದರು.

Key words: DCM -Govinda Karajola- meeting – officials – implementation – STP and TSP –programs