ಬಿಬಿಎಂಪಿ ಮಾಜಿ ಮೇಯರ್ ಗಳ ಜೊತೆ ಸಭೆ ನಡೆಸಿ ಮಹತ್ವದ ಸೂಚನೆಗಳನ್ನ ನೀಡಿದ ಡಿಸಿಎಂ ಡಿ.ಕೆ ಶಿವಕುಮಾರ್.

Promotion

ಬೆಂಗಳೂರು,ಜೂನ್,1,2023(www.justkannada.in): ಬಿಬಿಎಂಪಿ ಚುನಾವಣೆಗೆ ತಯಾರಿ ಹಿನ್ನೆಲೆ  ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇಂದು  ಬಿಬಿಎಂಪಿ  ಮಾಜಿ ಮೇಯರ್ ಗಳು ಮತ್ತು ಇತರ ಕೆಲ ನಾಯಕರೊಂದಿಗೆ ಸಭೆ ನಡೆಸಿ ಚರ್ಚಿಸಿದರು.

ಪಾಲಿಕೆ ಚುನಾವಣೆಯನ್ನು ಇಷ್ಟರಲ್ಲೇ ಘೋಷಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಇಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಬಿಬಿಎಂಪಿ ಮಾಜಿ ಮೇಯರ್ ಗಳಜೊತೆ ಸಭೆ ನಡೆಸಿ ಕೆಲ ಮಹತ್ವದ ಸೂಚನೆಗಳನ್ನ ನೀಡಿದರು.

ಬಿಬಿಎಂಪಿ ಚುನಾವಣೆಗೆ ಸಿದ್ಧರಾಗಿ. ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲಬೇಕು ಮೀಸಲಾತಿ, ವಾರ್ಡ್ ಮರು ವಿಂಗಡಣೆ ವಿಚಾರ ಸರ್ಕಾರದ ತೀರ್ಮಾನ. ಸೋತಿರುವ ಕ್ಷೇತ್ರಗಳನ್ನ ಗುರಿಯಾಗಿಸಿಕೊಂಡು ಕೆಲಸ ಮಾಡಿ ಎಂದು ಸೂಚನೆ ನೀಡಿದರು.

ಬಳಿಕ ಮಾತನಾಡಿದ ಡಿ.ಕೆ ಶಿವಕುಮಾರ್, ಬೆಂಗಳೂರು ಪಾಲಿಕೆ ಮಾಜಿ ಮೇಯರ್​​ ಗಳ ಸಭೆ ನಡೆಸಿದ್ದೇನೆ. ಯಾವ ರೀತಿ ಅಭಿವೃದ್ಧಿ ಮಾಡಬಹುದು ಅಂತಾ ಸಲಹೆ ಕೇಳಿದ್ದೇನೆ. ರಿಂಗ್‌ರೋಡ್‌ ಗಳಲ್ಲಿ ರಸ್ತೆ ಬದಿ, ಕೆರೆಗಳಲ್ಲಿ ಕಸ ಎಸೆಯುತ್ತಿದ್ದಾರೆ. ಈ ಬಗ್ಗೆ ಸಭೆಯಲ್ಲಿ ಸಲಹೆಗಳನ್ನು ಕೇಳಿದ್ದಾರೆ ಎಂದು ತಿಳಿಸಿದರು.

Key words: DCM- DK Shivakumar – meeting -former mayors -BBMP – important instructions.