ಭೀಕರ ಅಪಘಾತ: ಓರ್ವ ಮಹಿಳಾ ಪಿಎಸ್ ಐ ಸೇರಿ 6 ಮಂದಿಗೆ ಗಾಯ…

Promotion

ದಾವಣಗೆರೆ,ನವೆಂಬರ್,25,2020(www.justkannada.in): ಪೊಲೀಸರು ತೆರಳುತ್ತಿದ್ದ ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ  ಓರ್ವ ಮಹಿಳಾ ಪಿಎಸ್ ಐ ಸೇರಿ 6 ಮಂದಿ ಗಾಯಗೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.davanagere-terrible-accident-women-psi-6-people-injured

ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಓರ್ವ ಮಹಿಳಾ ಪಿ ಎಸ್ ಐ ಸೇರಿದಂತೆ 6 ಮಂದಿಗೆ  ಗಾಯಗಳಾಗಿದೆ. ಬೆಂಗಳೂರಿನ ಮಾಗಡಿ ಪೊಲೀಸ್ ಠಾಣೆಯ ಪಿ ಎಸ್ ಐ ಸುಧಾ, 3 ಜನ ಕಾನ್ಸ್ ಟೇಬಲ್ ಮತ್ತು ಓರ್ವ ಆರೋಪಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ವಾಹನ ಚಾಲಕನ ಸ್ಥಿತಿ ಗಂಭೀರವಾಗಿದ್ದು ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೇಸ್ ನ ವಿಚಾರವಾಗಿ ಬೆಂಗಳೂರಿನಿಂದ ಬೆಳಗಾವಿಗೆ ಖಾಸಗಿ ವಾಹನದಲ್ಲಿ ಪೊಲೀಸ್ ಸಿಬ್ಬಂದಿ ತೆರಳುತ್ತಿದ್ದರು. ಈ ಕುರಿತು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: davanagere- terrible -accident.- -women PSI-6 people- injured