ತ್ರಿಪುರಾ, ಮೆಘಾಲಯ, ನಾಗಲ್ಯಾಂಡ್ ರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿನಾಂಕ ಫಿಕ್ಸ್: ಒಂದೇ ಹಂತದಲ್ಲಿ ಮತದಾನ.

ನವದೆಹಲಿ,ಜನವರಿ,18,2023(www.justkannada.in): ನಾಗಾಲ್ಯಾಂಡ್ , ತ್ರಿಪುರಾ (Tripura) ಮತ್ತು ಮೇಘಾಲಯ ರಾಜ್ಯಗಳ ವಿಧಾನಸಭಾ ಚುನಾವಣೆಯ ದಿನಾಂಕವನ್ನ ಭಾರತೀಯ ಚುನಾವಣಾ ಆಯೋಗ ಪ್ರಕಟಿಸಿದೆ.

ಇಂದು ನವದೆಹಲಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಚುನಾವಣಾ ದಿನಾಂಕ ಪ್ರಕಟಿಸಿದ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಮೂರು ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ತ್ರಿಪುರಾದಲ್ಲಿ ಫೆಬ್ರುವರಿ 16ಕ್ಕೆ ಚುನಾವಣೆ ನಡೆಯಲಿದೆ. ನಾಗಾಲ್ಯಾಂಡ್, ಮೇಘಾಲಯದಲ್ಲಿ ಫೆಬ್ರವರಿ 27ಕ್ಕೆ ಮತದಾನ ನಡೆಯಲಿದ್ದು ಮಾರ್ಚ್ 2 ರಂದು ಮೂರು ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳಲಿದೆ.

ಈ ಮೂರು ರಾಜ್ಯಗಳು – ಮತದಾನದಲ್ಲಿ ಹೆಚ್ಚಿನ ಮಹಿಳಾ ಭಾಗವಹಿಸುವಿಕೆಗೆ ಉದಾಹರಣೆಯಾಗಿದೆ. ಹಿಂಸಾಚಾರ ಮುಕ್ತ ಚುನಾವಣೆಗೆ ಆಯೋಗ ಬದ್ಧವಾಗಿದೆ, ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಜಾಗವಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.

Key words: Date fixed – Tripura-Meghalaya- Nagaland- assembly -elections.