ದರ್ಶನ್ ‘ರಾಜ ವೀರ ಮದಕರಿ ನಾಯಕ’ ಶೂಟಿಂಗ್ ​​​ಗೆ ಡೇಟ್ ಫಿಕ್ಸ್

Promotion

ಬೆಂಗಳೂರು, ಜನವರಿ 23, 2019 (www.justkannada.in): ದರ್ಶನ್ ಅಭಿನಯದ ಬಹು ನಿರೀಕ್ಷಿತ ‘ರಾಜ ವೀರ ಮದಕರಿ ನಾಯಕ’ ಚಿತ್ರದ ಶೂಟಿಂಗ್​​​ಗೆ ದಿನಾಂಕ ಫಿಕ್ಸ್ ಆಗಿದೆ.

ಚಿತ್ರದ ಮೊದಲ ಶೆಡ್ಯೂಲನ್ನು ಕೇರಳದಲ್ಲಿ ಚಿತ್ರೀಕರಿಸಲು ಪ್ಲ್ಯಾನ್ ಮಾಡಲಾಗಿದೆ. ಈಗಾಗಲೇ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಲೊಕೇಶನ್ ಹುಡುಕಿದ್ದಾರೆ.

ಕೇರಳದ ಹೆಸರಾಂತ ಜಲಪಾತಗಳ ಬಳಿ ಬೃಹತ್ ಸೆಟ್ ಹಾಕಲು ಎಲ್ಲಾ ತಯಾರಿ ಕೂಡಾ ನಡೆಯುತ್ತಿದೆ ಎನ್ನಲಾಗಿದೆ. ಫೆಬ್ರವರಿ 16 ದರ್ಶನ್ ಹುಟ್ಟುಹಬ್ಬದ ನಂತರ ಚಿತ್ರತಂಡ ಕೇರಳಕ್ಕೆ ಹಾರಲಿದೆ.

ದರ್ಶನ್​​ ಬರ್ತಡೇಗೆ ಸರ್​​​ಪ್ರೈಸ್ ಕೊಡಲು ಸಿದ್ಧತೆ ನಡೆಸುತ್ತಿತ್ತು ಹುಟ್ಟುಹಬ್ಬಕ್ಕೆ ‘ರಾಜ ವೀರ ಮದಕರಿ ನಾಯಕ’ ಮೋಷನ್ ಪೋಸ್ಟರ್ ಲಾಂಚ್ ಮಾಡಲಿದೆ ಎನ್ನಲಾಗುತ್ತಿದೆ.