ದಾಸೋಹ ಯೋಜನೆ ಅಕ್ಕಿ, ಗೋಧಿ ಪೂರೈಕೆ ಸ್ಥಗಿತ ವಿಚಾರ: ಸಂಪುಟ ಸಭೆಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಸಿಎಂ ಬಿಎಸ್ ವೈ ಕ್ಲಾಸ್…

ಬೆಂಗಳೂರು,ಫೆ,4,2020(www.justkannada.in): ದಾಸೋಹ ಯೋಜನೆಯಡಿಯಲ್ಲಿ ಸಿದ್ಧಗಂಗಾ ಮಠ ಸೇರಿ ಹಲವು ಸಂಘಸಂಸ್ಥೆಗಳಿಗೆ ಮಾಡಲಾಗುತ್ತಿದೆ ಅಕ್ಕಿ, ಗೋಧಿ ಪೂರೈಕೆಯನ್ನ ಸ್ಥಗಿತಗೊಳಿಸಿದ ಹಿನ್ನೆಲೆ ಆಹಾರ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಕ್ಲಾಸ್ ತೆಗೆದುಕೊಂಡರು.

ದಾಸೋಹ ಯೋಜನೆಯಡಿ ಸಿದ್ಧಗಂಗಾ ಮಠ ಸೇರಿ 454 ಸಂಘಸಂಸ್ಥೆಗಳಿಗೆ ಅಕ್ಕಿ ಗೋಧಿ ಪೂರೈಕೆ ಮಾಡಲಾಗುತ್ತಿತ್ತು. ಆದರೆ ಈ ಯೋಜನೆಯನ್ನ ಸರ್ಕಾರ ಸ್ಥಗಿತಗೊಳಿಸಿದೆ. ಈ ಸರ್ಕಾರಕ್ಕೆ ಕರುಣೆಯೇ ಇಲ್ಲ ಎಂದು ಆರೋಪಿಸಿ ಮಾಜಿ ಸಚಿವ ಯು.ಟಿ ಖಾದರ್ ಈ ಕುರಿತು ದಾಖಲೆ ಬಿಡುಗಡೆ ಮಾಡಿದ್ದರು.

ಈ ಸಂಬಂಧ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ಆರಂಭವಾಗುತ್ತಿದ್ದಂತೆ ಆಹಾರ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಸಿಎಂ ಬಿಎಸ್ ಯಡಿಯೂರಪ್ಪ ತರಾಟೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.  ಮಠದ ಮಕ್ಕಳ ಅಕ್ಕಿ ಕಿತ್ತಿಕೊಂಡರು ಅಂತಾ ಸರ್ಕಾರಕ್ಕೆ ಕೆಟ್ಟಹೆಸರು ಬರಲ್ವಾ ಜೊಲ್ಲೆ ಅವರೇ ಕೂಡಲೇ ಇದನ್ನ ಸರಿಪಡಿಸಿ, ಅಕ್ಕಿ ಗೋಧಿ ಪೂರೈಸಲು ಕ್ರಮ ಕೈಗೊಳ್ಳಿ ಎಂದು ಸಚಿವೆ ಶಶಿಕಲಾ ಜೊಲ್ಲೆಗೆ ಸಿಎಂ ಬಿಎಸ್ ಯಡಿಯೂರಪ್ಪ ಸೂಚಿಸಿದರು.

Key words: Dashosa project -rice -wheat -supply –cm bs yeddyurappa-class-minister-shashikala jolle