ದಸರಾ ಜಂಬೂಸವಾರಿ: ಕೊರೊನಾ ವಿಷಯಾಧಾರಿತ ಸ್ತಬ್ಧಚಿತ್ರ ಕೊರೊನ ವಾರಿಯರ್ಸ್‌ಗೆ ಅರ್ಪಣೆ

Promotion

ಮೈಸೂರು,ಅಕ್ಟೋಬರ್,24,2020 : ದಸರಾ ಜಂಬೂಸವಾರಿಯಂದು ಕೊರೊನಾ ಮಹಾಮಾರಿಯ ವಿಷಯಾಧಾರಿತ ಪುಟ್ಟ ಸ್ತಬ್ಧ ಚಿತ್ರ ಸಾರ್ವಜನಿಕರಿಗೆ ಅನಾವರಣವಾಗಲಿದ್ದು, ಯುವ ಕಲಾವಿದ ಶಿವಕುಮಾರ್ ಎಚ್.ದೊಡ್ಡರಿಸಿನಕೆರೆ ಕೊರೊನಾ ವಾರಿಯರ್ಸ್‌ಗೆ ಅರ್ಪಿಸಿದ್ದಾರೆ.

ಶಿವಕುಮಾರ್ ಎಚ್.ದೊಡ್ಡರಿಸಿನಕೆರೆ ಅವರು ಮಹಾಮಾರಿ ಕೊರೋನಾ ಕುರಿತು ಜಾಗೃತಿ ಮೂಡಿಸಲು ನಾಲ್ಕು ಅಡಿ ಉದ್ದ ಮೂರು ಅಡಿ ಅಗಲ, ಮೂರು ಅಡಿ ಎತ್ತರವುಳ್ಳ ಪುಟ್ಟ ಸ್ತಬ್ದಚಿತ್ರವನ್ನು(ಟ್ಯಾಬ್ಲೋ)ತಯಾರಿಸಿದ್ದಾರೆ.

ಶ್ರೀ ಕೋಟೆ ಆಂಜನೇಯ ಸನ್ನಿಧಿಯ ಮುಂಭಾಗ ಅ.26ರಂದು ಬೆ.11ಕ್ಕೆ ಕೊರೋನಾ ವಾರಿಯರ್ಸ್‌ರವರು ಸ್ತಬ್ದ ಚಿತ್ರವನ್ನು ಉದ್ಘಾಟನೆಯಾಗಲಿದೆ. ಮೈಸೂರು ನಗರದ ಜನತೆ ಕೊರೋನಾ ವಿರುದ್ಧ ಜಾಗೃತರಾಗಿ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಮುಖ ವೃತ್ತಗಳಾದ ಚಾಮರಾಜೇಂದ್ರ ಮತ್ತು ಕೃಷ್ಣರಾಜೇಂದ್ರ ವೃತ್ತಗಳಲ್ಲಿ ಸಾರ್ವಜನಿಕರಿಗೆ ಪ್ರದರ್ಶಿಸಲಾಗುವುದು. ಇದರಿಂದ ಯಾವುದೇ ರೀತಿಯ ಟ್ರಾಫಿಕ್ ಹಾಗೂ ಸಾರ್ವಜನಿಕರಿಗೆ ಯಾವುದೇ ರೀತಿಯಿಂದಲೂ ತೊಂದರೆಯಾಗದಂತೆ ಗಮನದಲ್ಲಿಟ್ಟುಕೊಂಡು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಿವಕುಮಾರ್ ಎಚ್.ದೊಡ್ಡರಸಿನಕೆರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.