ಜಯದೇವ ಆಸ್ಪತ್ರೆ ಮುಖ್ಯಸ್ಥ ಡಾ‌.ಮಂಜುನಾಥ್ ಅವರಿಂದ ದಸರಾ ಉದ್ಘಾಟಿಸಿ-ಸಂಸದ ಪ್ರತಾಪ್ ಸಿಂಹ…

Promotion

ಮೈಸೂರು,ಸೆಪ್ಟಂಬರ್,10,2020(www.justkannada.in):  ಕೊರೋನಾ ಹಿನ್ನೆಲೆ ಈ ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಸರಳ ಮತ್ತು ಸಾಂಪ್ರದಾಯಕವಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ನಡುವೆ ಈ ಬಾರಿ ಕೊರೋನಾ ವಾರಿಯರ್ಸ್ ರಿಂದ ದಸರಾ ಉದ್ಘಾಟಿಸಲು ತೀರ್ಮಾನಿಸಲಾಗಿದ್ದು, ದಸರಾ ಉದ್ಘಾಟಕರ ಆಯ್ಕೆ ನಾಳೆ ನಡೆಯುವ ಸಭೆಯಲ್ಲಿ ಅಂತಿಮವಾಗುವ ಸಾಧ್ಯತೆ ಇದೆ.jk-logo-justkannada-logo

ಈ  ಕುರಿತು ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ, ಜಯದೇವ ಆಸ್ಪತ್ರೆ ಮುಖ್ಯಸ್ಥ ಡಾ‌.ಮಂಜುನಾಥ್ ಅವರಿಂದ ಮೈಸೂರು ದಸರಾ ಉದ್ಘಾಟಿಸಿ ಎಂದು ಮನವಿ ಮಾಡಿದ್ದಾರೆ.

ದಸರಾ ಉದ್ಘಾಟನೆಗೆ ವೈದ್ಯರು, ಆಶಾ ಕಾರ್ಯಕರ್ತರು, ಪೌರಕಾರ್ಮಿಕರು ಹೆಸರುಗಳು ಕೇಳಿ ಬಂತು. ಪೊಲೀಸ್ ಇಲಾಖೆಗೂ ಅವಕಾಶ ಕೊಡುವಂತೆ ಸಭೆಯಲ್ಲಿ ಕೇಳಿದ್ದೆ. ಅದರಂತೆ ಉದ್ಘಾಟನೆಯಲ್ಲಿ 5 ಇಲಾಖೆ ವಾರಿಯರ್‌ಗಳನ್ನು ಕರೆಸಿ ಸನ್ಮಾನ ಮಾಡಲಾಗುವುದು. ಇದಕ್ಕೆ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ. ದಸರಾ ಉದ್ಘಾಟನಾ ಭಾಷಣಕ್ಕೆ ಒಬ್ಬರಿಗೆ ಅವಕಾಶ ಇರೋದು. ಆ ಆವಕಾಶವನ್ನು ಜಯದೇವ ಆಸ್ಪತ್ರೆ ಮುಖ್ಯಸ್ಥ ಡಾ.ಮಂಜುನಾಥ್ ನೀಡುವಂತೆ ಕೋರುತ್ತೇನೆ ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ.dasara-inaugurate-jayadeva-hospital-head-dr-manjunath-mysore-mp-pratap-simha

ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಾಳೆ ಮತ್ತೊಂದು ಸಭೆ ನಡೆಯಲಿದೆ. ಐವರು ವಾರಿಯರ್‌ಗಳು ಯಾರು ಎಂಬುದನ್ನು ಆಯ್ಕೆ ಮಾಡುವುದೂ ಸವಾಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

Key words: Dasara-inaugurate- Jayadeva Hospital- Head -Dr. Manjunath-mysore- MP- Pratap simha