ಅಮೆಜಾನ್ ಪ್ರೈಂ ಜೊತೆ ‘ಒಳ್ಳೇ ಡೀಲ್’ ಮಾಡಿದ ‘ರಾಬರ್ಟ್’ !

Promotion

ಬೆಂಗಳೂರು, ಏಪ್ರಿಲ್ 21, 2021 (www.justkannada.in): ರಾಬರ್ಟ್ ಚಿತ್ರ ಏಪ್ರಿಲ್ 25 ರಂದು ಚಿತ್ರ ಅಮೇಜಾನ್​ ಪ್ರೈಮ್​ನಲ್ಲಿ ರಿಲೀಸ್ ಆಗುತ್ತಿದೆ‌.

ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಒಟಿಟಿ ಫ್ಲಾಟ್ ಫಾರಂನಲ್ಲಿ ರಿಲೀಸ್ ಆಗುತ್ತಿದೆ.

ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ಬಾಚಿಕೊಂಡಿರುವ ರಾಬರ್ಟ್ ಅಮೆಜಾನ್ ಪ್ರೈಂನಲ್ಲೂ ಒಳ್ಳೆಯ ಮೊತ್ತಕ್ಕೆ ಸೇಲ್ ಆಗಿದೆ.

ಮೂಲಗಳ ಪ್ರಕಾರ 20 ಕೋಟಿ ಮೊತ್ತಕ್ಕೆ ರಾಬರ್ಟ್ ಸಿನಿಮಾ ಅಮೇಜಾನ್ ಪ್ರೈಮ್​ನಲ್ಲಿ ಮಾರಾಟವಾಗಿದೆ ಎನ್ನಲಾಗಿದೆ.

ದಚ್ಚು ಅಭಿಮಾನಿಗಳು ಮನೆಯಲ್ಲೇ, ಫ್ಯಾಮಿಲಿ ಸಮೇತ ಚಿತ್ರ ನೋಡಬಹುದಾಗಿದೆ.