ಇಂದು ಸಂಜೆ ಯೂಟ್ಯೂಬ್’ನಲ್ಲಿ ‘ಬಾ ಬಾ ಬಾ ನಾ ರೆಡಿ’ ಎನ್ನುತ್ತಾರೆ ದಚ್ಚು!

Promotion

ಬೆಂಗಳೂರು, ಏಪ್ರಿಲ್ 21, 2021 (www.justkannada.in): ‘ರಾಬರ್ಟ್’ ಚಿತ್ರದ ಬಾ ಬಾ ಬಾ ನಾ ರೆಡಿ ವಿಡಿಯೋ ಹಾಡನ್ನು ಇಂದು ಬಿಡುಗಡೆಯಾಗಲಿದೆ.

ಹೌದು. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ರಾಬರ್ಟ್’ ಚಿತ್ರದ ಬಾ ಬಾ ಬಾ ನಾ ರೆಡಿ ಸಾಂಗ್ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್‌ ನಲ್ಲಿ ರಿಲೀಸ್ ಆಗಲಿದೆ.

ಇಂದು ಸಂಜೆ 4.05ಕ್ಕೆ ಹಾಡನ್ನು ಬಿಡುಗಡೆ ಮಾಡಲಾಗುತ್ತಿದೆ. ಅಂದಹಾಗೆ ಈ ಹಿಂದೆ ರಿಲೀಸ್ ಆಗಿದ್ದ ಈ ಹಾಡಿನ ಲಿರಿಕಲ್ ವಿಡಿಯೋ 28 ಮಿಲಿಯನ್ ವೀಕ್ಷಣೆ ಪಡೆದಿತ್ತು.

ರಾಬರ್ಟ್ ಮ್ಯೂಸಿಕಲ್ ಹಿಟ್ ಸಿನಿಮಾವಾಗಿದ್ದು, ಎಲ್ಲಾ ಹಾಡುಗಳು ಯುಟ್ಯೂಬ್ ನಲ್ಲಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿವೆ.