ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಒಡೆಯ’ ಟೀಸರ್ ಬಿಡುಗಡೆ ಡೇಟ್ ಫಿಕ್ಸ್

Promotion

ಬೆಂಗಳೂರು, ನವೆಂಬರ್ 21, 2019 (www.justkannada.in): ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಟೀಸರ್ ಬಿಡುಗಡೆಗೆ ಅಭಿಮಾನಿಗಳು ಕಾದಿದ್ದಾರೆ.

ಈ ಹಿಂದೆ ದಾಖಲೆಯ ವೀಕ್ಷಣೆ ಪಡೆದಿದ್ದ ಟೀಸರ್ ಒಡೆಯ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಡಿಸೆಂಬರ್ 12 ಕ್ಕೆ ಸಿನಿಮಾ ಬಿಡುಗಡೆಯಾಗುವ ಸುದ್ದಿಯೂ ಬಂದಿದೆ.

ಅದಕ್ಕಿಂತ ಮೊದಲು ಟ್ರೈಲರ್ ಬಿಡುಗಡೆಯಾಗಲಿದೆ. ಕೆಲವು ಮೂಲಗಳ ಪ್ರಕಾರ ಡಿಸೆಂಬರ್ 1 ರಂದು ಟ್ರೈಲರ್ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಈ ಬಗ್ಗೆ ಚಿತ್ರತಂಡ ಇನ್ನೂ ಕನ್ ಫರ್ಮ್ ಮಾಡಿಲ್ಲ.