ಅನರ್ಹ ಶಾಸಕ ಆರ್.ಶಂಕರ್ ಗೆ ಟಿಕೆಟ್ ನೀಡಿದ್ರೆ ಪಕ್ಷಕ್ಕೆ ಡ್ಯಾಮೇಜ್ ಗ್ಯಾರಂಟಿ-ಎಚ್ಚರಿಕೆ ನೀಡಿದ ಬಿಜೆಪಿ ಟಿಕೆಟ್ ಆಕಾಂಕ್ಷಿ…

Promotion

ಹಾವೇರಿ,ಸೆ,24,2019(www.justkannada.in): ಅನರ್ಹ ಶಾಸಕರಿಂದಲೇ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಆದರೆ ಉಪಚುನಾವಣೆಯಲ್ಲಿ  ರಾಣಿಬೆನ್ನೂರು ಕ್ಷೇತ್ರದಿಂದ ಟಿಕೆಟ್ ನೀಡಿದರೇ ಪಕ್ಷಕ್ಕೆ ಡ್ಯಾಮೇಜ್ ಆಗೋದು ಗ್ಯಾರಂಟಿ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ಬಸವರಾಜು ಕೆಲಗಾರ ಎಚ್ಚರಿಕೆ ನೀಡಿದ್ದಾರೆ.

ರಾಣಿಬೆನ್ನೂರಿನಲ್ಲಿ ಇಂದು ಮಾತನಾಡಿದ ಬಿಜೆಪಿ ಟಿಕೆಟ್ ಆಕಾಂಕ್ಷಿ ಬಸವರಾಜು ಕೆಲಗಾರ,  ಅನರ್ಹ ಶಾಸಕರಿಂದಲೇ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಆದರೆ, ಅವರೇನು ಸ್ವಾತಂತ್ರ್ಯ ಹೋರಾಟಗಾರರಲ್ಲ. ಅವರ ತ್ಯಾಗ ಶ್ರಮ ಹೋರಾಟ ಎಂಬುದಿಲ್ಲ.  ಅವರು ಅಸೆ, ಆಕಾಂಕ್ಷೆ ಇಟ್ಟುಕೊಂಡೇ ಪಕ್ಷದಿಂದ ಹೊರಬಂದಿದ್ದಾರೆ. ಅವರಿಗೆ ಅಧಿಕಾರ ಕೊಡಿ, ಸಚಿವರನ್ನಾಗಿ ಮಾಡಿ. ಎಂಎಲ್ ಸಿ, ಮಂತ್ರಿ, ನಿಗಮ ಮಂಡಳಿ ಕೊಡಿ, ಆದರೆ ಉಪಚುನಾವಣೆಯಲ್ಲಿ ಪಕ್ಷದ ಟಿಕೆಟ್ ಕೊಡಬೇಡಿ. ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಿ ಎಂದು  ತಿಳಿಸಿದರು.

ಹಾಗೆಯೇ  ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದಿಂದ ಅನರ್ಹ ಶಾಸಕ ಆರ್. ಶಂಕರ್ ಗೆ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಟಿಕೆಟ್ ಕೊಡಬೇಡಿ. ಒಂದು ವೇಳೆ ಅವರಿಗೆ ಟಿಕೆಟ್ ಕೊಟ್ಟಿದ್ದೇ ಆದ್ರೆ ಪಕ್ಷಕ್ಕೆ ಡ್ಯಾಮೇಜ್ ಆಗೋದು ಖಚಿತ ಎಂದು ಬಸವರಾಜು ಕೆಲಗಾರ ಎಚ್ಚರಿಕೆ ನೀಡಿದರು.

Key words: Damage -party – ticket –disqualified MLA- R Shankar-BJP- ticket aspirant.