ದಲಿತ ಮುಖ್ಯಮಂತ್ರಿ ಕೂಗು: ಬಹಿರಂಗ ಸಭೆಯಲ್ಲೇ ಸ್ಪಷ್ಟನೆ ನೀಡಿದ ಸಿದ್ಧರಾಮಯ್ಯ.

ಮೈಸೂರು,ನವೆಂಬರ್,9,2021(www.justkannada.in):  ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಕೂಗು ಹಿನ್ನೆಲೆ ಈ ಕುರಿತು ಮಾಜಿ ಸಿಎಂ ಸಿದ್ಧರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ದಲಿತರು ಸಿಎಂ ಆದ್ರೆ ನನ್ನದು ಏನು ತಕರಾರು ಇಲ್ಲ. ಕಾಂಗ್ರೆಸ್ ನಲ್ಲಿ ಯಾರು ಸಿಎಂ ಆಗಬೇಕು ಅನ್ನೋದನ್ನ ಹೈ ಕಮಾಂಡ್ ನಿರ್ಧಾರ ಮಾಡುತ್ತದೆ. ಶಾಸಕರು ಸೂಚಿಸಿದವರನ್ನ ಹೈಕಮಾಂಡ್ ಮುಖ್ಯಮಂತ್ರಿ ಅಂತಾ ಸೂಚಿಸುತ್ತಾರೆ. ಒಂದು ವೇಳೆ ದಲಿತರು ಸಿಎಂ ಆದರೆ ನಾನು ಸ್ವಾಗತ ಮಾಡುತ್ತೇನೆ. ದಲಿತ ಸಿಎಂ ಆದರೆ ಮೋಸ್ಟ್ ಹ್ಯಾಪಿಯಸ್ಟ್ ಪರ್ಸನ್ ನಾನು‌. ಕಾಂಗ್ರೆಸ್ ಪಕ್ಷ ಮೂರ್ನಾಲ್ಕು ರಾಜ್ಯಗಳಲ್ಲಿ ದಲಿತ ಸಿಎಂ ಮಾಡಿದೆ ಎಂದರು.

ನಾನು ಸಹ ಅಂಬೇಡ್ಕರ್ ವಾದಿಯೇ. ಬಸವ,ಬುದ್ದ,ಅಂಬೇಡ್ಕರ್ ತತ್ವಗಳನ್ನು ನಾನು ಪಾಲಿಸುತ್ತೇನೆ. ನಾನು ಅಧಿಕಾರಕ್ಕಾಗಿ ರಾಜಿ ಮಾಡಿಕೊಳ್ಳುವುದಿಲ್ಲ. ಕಾಂಗ್ರೆಸ್ ನಲ್ಲಿ ಮಾತ್ರ ದಲಿತರು ಮುಖ್ಯಮಂತ್ರಿ ಆಗಲು ಸಾಧ್ಯ. ದೇಶದ ಐದಾರು ರಾಜ್ಯಗಳಲ್ಲಿ ಕಾಂಗ್ರೆಸ್ ನಿಂದ ದಲಿತರು ಮುಖ್ಯಮಂತ್ರಿ ಆಗಿದ್ದಾರೆ. ಬೇರೆ ಪಕ್ಷಗಳಲ್ಲಿ ದಲಿತರು ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ ಎಂದು ಸಿದ್ಧರಾಮಯ್ಯ ನುಡಿದರು.

ನಾನು ಕೂಡ ದಲಿತನೇ.

ಅನಂತ್ ಕುಮಾರ್ ಹೆಗಡೆ ನಾವು ಅಧಿಕಾರಕ್ಕೆ ಬಂದಿರೋದೆ ಸಂವಿಧಾನ ಬದಲಾವಣೆ ಮಾಡೋಕೆ ಅಂದರು. ಆಗ ಇವರೆಲ್ಲ ಬಾಯಿ ಮುಚ್ಚಿಕೊಂಡಿದ್ದರು. ಅವರು ಸ್ವಾರ್ಥಕ್ಕೋಸ್ಕರ ಬಿಜೆಪಿ ಸೇರಿಕೊಂಡರು ಅಂತ ಹೇಳಿದ್ದೆ. ಅದನ್ನ ಆರ್ ಎಸ್ಎಸ್ ಗಿರಾಕಿಗಳು ತಿರುಚಿದ್ದಾರೆ. ದಲಿತರನ್ನ ನನ್ನ ಮೇಲೆ ಎತ್ತಿಕಟ್ಟುವ ಕೆಲಸ ಮಾಡಿದರು. ನಾನು ಸಹ ದಲಿತನೇ. ಕೇವಲ ಪರಿಶಿಷ್ಟ ಪಂಗಡದವರು ಮಾತ್ರ ದಲಿತರಲ್ಲ.  ತುಳಿತಕ್ಕೊಳಗಾದ ಎಲ್ಲರೂ ದಲಿತರೇ. ನಾನು ಸಹ ತುಳಿತಕ್ಕೆ ಒಳಗಾಗಿದ್ದೇನೆ. ಹಾಗಾಗಿ ನಾನು ಕೂಡ ದಲಿತನೇ ಎಂದು ಸಿದ್ಧರಾಮಯ್ಯ ಹೇಳಿದರು.

ನನ್ನಂತ ಸ್ನೇಹಿತ ಅವನಿಗೆ ಮತ್ತೊಬ್ಬ ಸಿಗೋದು ಕಷ್ಟ. ಮಹಾದೇವಪ್ಪ ಇವತ್ತು ಬಂದಿಲ್ಲ. ರಾತ್ರಿ ಸಿಕ್ಕಿದ್ದ ಬರ್ತೀನಿ ಅಂದಿದ್ದ ಆದ್ರೆ ಯಾಕೋ ಬಂದಿಲ್ಲ ಎಂದು ತನ್ನ ಆಪ್ತ ಸ್ನೇಹಿತನ ಕುರಿತು ವೇದಿಕೆಯಲ್ಲಿ  ಸಿದ್ಧರಾಮಯ್ಯ ನುಡಿದರು.

ಈ ವೇಳೆ ವೇದಿಕೆಯಲ್ಲಿದ್ದ ವ್ಯಕ್ತಿಯಿಂದ ನಿಮ್ಮನ್ನು ಕಂಡರೆ ಮಹಾದೇವಪ್ಪಗೆ ಭಯ ಎಂದು  ಹೇಳಿದರು. ಈ ವೇಳೆ ನಗುತ್ತಲೇ ನನ್ನಂತಹ ಮತ್ತೊಬ್ಬ ಸ್ನೇಹಿತ ಸಿಗೋದು ಕಷ್ಟ ಎಂದ ಸಿದ್ದರಾಮಯ್ಯ ಹೇಳಿದರು. ಇಂದಿನ ಕಾರ್ಯಕ್ರಮಕ್ಕೆ ಮಾಜಿ ಸಚಿವ ಹೆಚ್.ಸಿ ಮಹಾದೇವಪ್ಪ ಗೈರಾಗಿದ್ದರು.

Key words: dalith CM-former CM-Siddaramaiah-clearify-mysore