ಶಿವಣ್ಣ, ರಕ್ಷಿತ್ ಶೆಟ್ಟಿಗೆ ‘ದಾದಾಸಾಹೇಬ್ ಫಾಲ್ಕೆ ಸೌತ್’ ಪ್ರಶಸ್ತಿ

Promotion

ಬೆಂಗಳೂರು, ಜನವರಿ 02, 2021 (www.justkannada.in): 

2020ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಸೌತ್ ಪ್ರಶಸ್ತಿಯ ಪಟ್ಟಿ ಪ್ರಕಟವಾಗಿದೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಗೆ ಈ ಪ್ರಶಸ್ತಿ ದೊರೆತಿದೆ.

ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ದಕ್ಷಿಣ ಭಾರತದ ನಾಲ್ಕು ಚಲನಚಿತ್ರೋದ್ಯಮಗಳ ಅತ್ಯುತ್ತಮ ಪ್ರತಿಭೆಗಳನ್ನು ಗೌರವಿಸಲು ನಡೆಯುವ ದಾದಾಸಾಹೇಬ್ ಫಾಲ್ಕೆ ಸೌತ್ ಪ್ರಶಸ್ತಿ ಹೊಸ ವರ್ಷದ ದಿನ ಅನೌನ್ಸ್ ಆಗಿದೆ.

ದಕ್ಷಿಣ ಭಾರತದ ಖ್ಯಾತ ನಟರಾದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಅಜಿತ್ ಕುಮಾರ್, ಮೋಹನ್ ಲಾಲ್ ಮತ್ತು ನಾಗಾರ್ಜುನ ಅಕ್ಕಿನೇನಿ ಅವರಿಗೆ 2020ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಸೌತ್ ಬಹುಮುಖ ನಟರು ಪ್ರಶಸ್ತಿ ದೊರೆತಿದೆ.

ಕನ್ನಡದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ರಕ್ಷಿತ್ ಶೆಟ್ಟಿ ಪಾಲಾಗಿದೆ. ಅವನೇ ಶ್ರೀಮನ್ನಾರಾಯಣ ಚಿತ್ರದ ಅಭಿನಯಕ್ಕೆ ಈ ಪ್ರಶಸ್ತಿ ದೊರೆತಿದೆ. ಇನ್ನು ನಟಿ ತಾನ್ಯಾ ಹೋಪ್ ಅವರಿಗೆ ಯಜಮಾನ ಚಿತ್ರದ ನಟನೆಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ.