ಇದು ಕಾಂಗ್ರೆಸ್ ಸರ್ಕಾರ ಅಲ್ಲ: ಡಿಕೆಶಿ ,ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರ- ಆರ್. ಅಶೋಕ್ ವ್ಯಂಗ್ಯ.

Promotion

ಬೆಂಗಳೂರು,ಮೇ,24,2023(www.justkannada.in):  ಇದು ಕಾಂಗ್ರೆಸ್ ಸರ್ಕಾರ ಅಲ್ಲ. ಇದು ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ  ಸಮ್ಮಿಶ್ರ ಸರ್ಕಾರ ಎಂದು ಮಾಜಿ ಸಚಿವ ಆರ್​.ಅಶೋಕ್ ವ್ಯಂಗ್ಯವಾಡಿದರು.

ಇಂದು ವಿಧಾನಸೌಧದಲ್ಲಿ ಮಾತನಾಡಿದ ಮಾಜಿ ಸಚಿವ ಆರ್​.ಅಶೋಕ್​,  ನಾನು ಕೂಡ ಉಪ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಸಿಎಂ ಮಾತನಾಡಿದ ಮೇಲೆ ನಾನೆ ಮಾತನಾಡಬೇಕು ಎಂಬುದು ಡಿಕೆ ಶಿವಕುಮಾರ್ ​ಗೆ ಚಾಳಿ ಆಗಿದೆ. ಸಂವಿಧಾನಿಕವಾಗಿ ಉಪ ಮುಖ್ಯಮಂತ್ರಿ ಹುದ್ದೆ ಇಲ್ಲ ಎಂದರು. ​

ಕಾಂಗ್ರೆಸ್ ನಿಂದ ಭಜರಂಗದಳ ಬ್ಯಾನ್ ಮಾಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಆರ್.ಅಶೋಕ್, ಭಜರಂಗದಳ ಮುಟ್ಟುದ್ರೆ ಸುಮ್ನೆ ಬಿಡಲ್ಲ. ಬಿಜೆಪಿಯಿಂದ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ನವರು ಅಧಿಕಾರಕ್ಕೆ ಬಂದ ತಕ್ಷಣ ಕರೆಂಟ್ ಫ್ರಿ ಅಂದರು.  ಆದರೆ ಕಾಂಗ್ರೆಸ್ ಸರ್ಕಾರ ಇನ್ಣೂ ಜಾರಿ ಮಾಡಿಲ್ಲ ಕಾಂಗ್ರೆಸ್ ಗ್ಯಾರಂಟಿ ನೋ ಡಿ ಜನ ಮತ ಹಾಕಿದ್ರು. ಆದರೆ ಈಗ ಕಾಂಗ್ರೆಸ್ ಸರ್ಕಾರದವರು ಷರತ್ತು ಹಾಕುತ್ತಿದ್ದಾರೆ ಎಂದು ಆರ್.ಅಶೋಕ್ ಕಿಡಿಕಾರಿದರು.

Key words: D.K Shivakumar- Siddaramaiah-coalition government-R. Ashok