ಮೈಸೂರಿನ ‘ಐಶ್(AIISH)’  ನಿಂದ ನಾಳೆ ‘ಸೈಕ್ಲೋಥಾನ್’….

Promotion

ಮೈಸೂರು,ಫೆ,7,2020(www.justkannada.in):  ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯು ನಾಳೆ ಸೈಕ್ಲೋಥಾನ್ ,ಸೈಕಲ್ ಜಾಥಾವನ್ನ ಆಯೋಜಿಸಿದೆ.

ಐಶ್ ಆವಾಜ್ 2020 ಅಂತರ್ ಕಾಲೇಜು ಸಾಂಸ್ಕೃತಿಕ ಮೇಳ ಇದರ ಅಂಗವಾಗಿ ನಾಳೆ ಬೆಳಿಗ್ಗೆ 8 ಗಂಟೆಗೆ ಸೈಕ್ಲೋಥಾನ್ ಆಯೋಜಿಸಲಾಗಿದ್ದು,  ಈ ಸೈಕ್ಲೋಥಾನ್ ಗೆ ಐಶ್ ನಿರ್ದೇಶಕಿ ಡಾ.ಎಂ ಪುಷ್ಪಾವತಿ  ಚಾಲನೆ ನೀಡಲಿದ್ದಾರೆ. ಈ ಜಾಥದಲ್ಲಿ ಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.

ಸೈಕಲ್ ಜಾಥಾ ನಗರದ ಕೋಟೆ ಆಂಜನೇಯ ದೇವಸ್ಥಾನದಿಂದ ಪ್ರಾರಂಭವಾಗಿ ಗಾಂಧಿ ಸ್ಕ್ವೇರ್, ದೇವರಾಜು ಅರಸು ರಸ್ತೆ, ಕುಕ್ಕರಹಳ್ಳಿ ಕೆರೆ, ಮಾರ್ಗವಾಗಿ  ಬೋಗಾದಿಯಲ್ಲಿರುವ ಸಂಸ್ಥೆಯ ಪಂಚವಟಿ ಕ್ಯಾಂಪಸ್ ಗೆ ತಲುಪಲಿದೆ. ಫಿಟ್ ಇಂಡಿಯಾ ಹೆಸರಿನಲ್ಲಿ ಈ ಜಾಥ ನಡೆಸಲಾಗುತ್ತಿದೆ.

ಫೆಬ್ರವರಿ 28,29 ಹಾಗೂ ಮಾರ್ಚ್ 1 ರಂದು ಐಶ್ ನ ಜಿಮ್ಕಾನ ವತಿಯಿಂದ ನಡೆಯುವ  ಐಶ್ ಆವಾಜ್ 2020 ಅಂತರ್ ಕಾಲೇಜು ಸಾಂಸ್ಕೃತಿಕ ಮೇಳದ ಅಂಗವಾಗಿ ಈ ಸೈಕಲ್ ಜಾಥ ಆಯೋಜಿಸಲಾಗಿದೆ.

Key words: Cyclothon – Mysore –AIISH- tomorrow